ಮಡಿಕೇರಿ, ಆ.10: ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಇಂದು ಮಧ್ಯಾಹ್ನದ ಬಳಿಕ ತಲಕಾವೇರಿ, ಶಾಂತಳ್ಳಿ, ಸೂರ್ಲಬ್ಬಿ ಗ್ರಾಮೀಣ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ತಲಕಾವೇರಿಗೆ ವರ್ಷಾರಂಭದಿಂದ ಇದುವರೆಗೆ 250 ಇಂಚು ಮಳೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ಮಳೆ 0.88 ಇಂಚು ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 110.59 ಇಂಚು ಮಳೆಯಾದರೆ ಕಳೆದ ವರ್ಷ ಇದೇ ಅವಧಿಯಲ್ಲಿ 52.92 ಇಂಚು ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.62 ಇಂಚು ಹಾಗೂ ಜನವರಿಯಿಂದ ಇದುವರೆಗೆ 155.50 ಇಂಚು ಹಾಗೂ ಕಳೆದ ವರ್ಷ ಇದೇ ಅವಧಿಯಲ್ಲಿ 75.16 ಇಂಚು ಮಳೆಯಾಗಿತ್ತು.
ವೀರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 0.19 ಇಂಚು ಮಳೆಯಾಗಿದ್ದು, ವರ್ಷಾರಂಭದಿಂದ ಇದುವರೆಗೆ 87.75 ಇಂಚು ಹಾಗೂ ಕಳೆದ ವರ್ಷ ಇದೇ ಅವಧಿಯಲ್ಲಿ 42.86 ಇಂಚು ಮಳೆಯಾಗಿತ್ತು.
ಸೋಮವಾರಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 0.82 ಇಂಚು ಜನವರಿಯಿಂದ ಇಲ್ಲಿಯವರೆಗಿನ ಮಳೆ 88.52 ಇಂಚು ಹಾಗೂ ಕಳೆದ ವರ್ಷ ಇದೇ ಅವಧಿಯಲ್ಲಿ 40.75 ಇಂಚು ಮಳೆಯಾಗಿತ್ತು.
ಹೋಬಳಿವಾರು ಮಳೆ ವಿವರ: ಹಿಂದಿನ 24 ಗಂಟೆಗಳಲ್ಲಿ ಮಡಿಕೇರಿ 2.70, ನಾಪೋಕ್ಲು 0.43, ಸಂಪಾಜೆ 1.80, ಭಾಗಮಂಡಲ 1.54 ಇಂಚು ಮಳೆಯಾಗಿದೆ. ವೀರಾಜಪೇಟೆ 0.11, ಹುದಿಕೇರಿ 0.55, ಶ್ರೀಮಂಗಲ 0.34, ಪೊನ್ನಂಪೇಟೆ 0.04, ಅಮ್ಮತ್ತಿ 0.11 ಇಂಚು ಹಾಗೂ ಸೋಮವಾರಪೇಟೆ 1.54, ಶನಿವಾರಸಂತೆ 0.77, ಶಾಂತಳ್ಳಿ 0.28, ಕೊಡ್ಲಿಪೇಟೆ 0.47, ಕುಶಾಲನಗರ 0.23, ಸುಂಟಿಕೊಪ್ಪ 0.62 ಇಂಚು ಮಳೆಯಾಗಿದೆ.