ಕುಶಾಲನಗರ, ಆ. 10: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ನೌಕರರ ವತಿಯಿಂದ ಪಟ್ಟಣದ ಸೆಸ್ಕ್ ಕಛೇರಿ ಆವರಣದಲ್ಲಿ ಚಾಮುಂಡೇಶ್ವರಿ ಪೂಜೆ ನಡೆಯಿತು.
ಆಷಾಡ ಶುಕ್ರವಾರ ಅಂಗವಾಗಿ ನಡೆದ ವಿಶೇಷ ಪೂಜೆ ಸಂದರ್ಭ ಸೆಸ್ಕ್ ಅಧಿಕಾರಿಗಳು, ಸಿಬ್ಬಂದಿ ನೌಕರರು ಪೂಜೋತ್ಸವದಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು. ಅರ್ಚಕÀ ಪ್ರಸನ್ನ ಪೂಜಾ ವಿಧಿ ನೆರವೇರಿಸಿದರು.
ಈ ಸಂದರ್ಭ ಸೆಸ್ಕ್ ಅಧಿಕಾರಿಗಳಾದ ಅಶೋಕ್, ಒ.ಕೆ.ವಿನಯ್, ಬಸವರಾಜು, ಸಿಬ್ಬಂದಿಗಳಾದ ಲವಕುಮಾರ್, ಡಿ.ಜೆ.ರೇಣುಕುಮಾರ್ ಸೇರಿದಂತೆ ನೌಕರರು ಇದ್ದರು.