ಮಡಿಕೇರಿ, ಆ. 9: ಕಳೆದ 24 ಗಂಟೆಗಳಲ್ಲಿ ಕೊಡಗು ಜಿಲ್ಲೆಯಾದ್ಯಂತ ಸರಾಸರಿ 2.86 ಇಂದು ಮಳೆಯಾಗಿದೆ. ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ಸರಾಸರಿ 109.71 ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಗೆ 52.81 ಇಂಚು ದಾಖಲಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಸರಾಸರಿ 3.59 ಇಂಚು ಮಳೆಯಾಗಿದ್ದು, ಜನವರಿಯಿಂದ ಈತನಕ 153.92 ಇಂಚು ದಾಖಲಾಗಿದೆ. ಕಳೆದ ವರ್ಷ ಈ ಅವಧಿಗೆ 75 ಇಂಚು ಮಳೆಯಾಗಿತ್ತು.

ಸೋಮವಾರಪೇಟೆ ತಾಲೂಕಿಗೆ ಕಳೆದ 24 ಗಂಟೆಗಳಲ್ಲಿ 3.04 ಇಂಚು ಹಾಗೂ ವರ್ಷಾರಂಭದಿಂದ ಇದುವರೆಗೆ 87.69 ಇಂಚು ದಾಖಲಾಗಿದೆ. ಹಿಂದಿನ ಅವಧಿಗೆ 40.60 ಇಂಚು ಮಳೆಯಾಗಿತ್ತು.

ವೀರಾಜಪೇಟೆ ತಾಲೂಕಿಗೆ ಕಳೆದ 24 ಗಂಟೆಗಳಲ್ಲಿ 1.96 ಇಂಚು ಮಳೆಯೊಂದಿಗೆ, ಪ್ರಸಕ್ತ ವರ್ಷದಲ್ಲಿ 87.55 ಇಂಚು ದಾಖಲಾಗಿದೆ. ಕಳೆದ ವರ್ಷ ಈ ತನಕ 40.60 ಇಂಚು ಮಳೆಯಾಗಿತ್ತು.

ಜಿಲ್ಲಾ ಕೇಂದ್ರ ಮಡಿಕೇರಿಗೆ ಕಳೆದ 24 ಗಂಟೆಗಳಲ್ಲಿ 5.66 ಇಂಚು, ನಾಪೋಕ್ಲು 2.45 ಇಂಚು, ಸಂಪಾಜೆ 3.77 ಇಂಚು, ಭಾಗಮಂಡಲ 2.45 ಇಂಚು ದಾಖಲಾಗಿದೆ. ವೀರಾಜಪೇಟೆ 2.07 ಇಂಚು, ಹುದಿಕೇರಿ 2.89 ಇಂಚು, ಶ್ರೀಮಂಗಲ 2.74 ಇಂಚು, ಪೊನ್ನಂಪೇಟೆ 1.11 ಇಂಚು, ಅಮ್ಮತ್ತಿ 1.77 ಇಂಚು, ಬಾಳೆಲೆ 0.59 ಇಂಚು ಮಳೆಯಾಗಿದೆ.

ಸೋಮವಾರಪೇಟೆ 3.22 ಇಂಚು, ಶನಿವಾರಸಂತೆ 2.84 ಇಂಚು, ಶಾಂತಳ್ಳಿ 5.19 ಇಂಚು, ಕೊಡ್ಲಿಪೇಟೆ 1.53 ಇಂಚು, ಕುಶಾಲನಗರ 1.18 ಇಂಚು, ಸುಂಟಿಕೊಪ್ಪ 4.29 ಇಂಚು ಮಳೆ ದಾಖಲಾಗಿದೆ. ತಲಕಾವೇರಿಗೆ 3.37 ಇಂಚು ಮಳೆಯಾಗಿದ್ದು, ಆ ಭಾಗದಲ್ಲಿ ಇಳಿಮುಖ ಗೋಚರಿಸಿದೆ.