ಮಡಿಕೇರಿ, ಆ. 7: ಮಾನಸಿಕ ಅಸ್ವಸ್ಥರ ಮುಕ್ತ ಸಮಾಜ ಅಭಿಯಾನ ನಡೆಸುತ್ತಿರುವ ಮಡಿಕೇರಿಯ ವಿಕಾಸ್ ಜನಸೇವಾ ಟ್ರಸ್ಟ್ನ ಪ್ರಮುಖರು ಗುಡ್ಡೆಹೊಸೂರು ಸಮೀಪ ಆನೆಕಾಡು ರಸ್ತೆಯಲ್ಲಿ ಬುದ್ಧಿಮಾಂದ್ಯ ಹಾಗೂ ಮಾತು ಬಾರದ ಬಾಲಕನೊಬ್ಬನನ್ನು ಪತ್ತೆ ಹಚ್ಚಿದ್ದಾರೆ.
ಸರಕಾರಿ ಬಾಲಕರ ಬಾಲ ಮಂದಿರದ ಅಧಿಕಾರಿಗಳ ಸಲಹೆಯಂತೆ 16 ರಿಂದ 18 ವರ್ಷ ಪ್ರಾಯದ ಬಾಲಕನನ್ನು ಟ್ರಸ್ಟ್ನ ಆಶ್ರಯದಲ್ಲಿ ಇರಿಸಿಕೊಳ್ಳಲಾಗಿದೆ ಎಂದು ತಿಳಿಸಿರುವ ಟ್ರಸ್ಟ್ ಅಧ್ಯಕ್ಷ ಎಚ್.ಕೆ. ರಮೇಶ್ ವಾರಸುದಾರರು ಈ ಮೊ.ಸಂ.ಗಳನ್ನು 94831 10528, 99023 22459, 08272 223433 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.