ಗೋಣಿಕೊಪ್ಪಲು, ಆ. 7: ಶ್ರೀಮಂಗಲ ನಾಡು ನಾಲ್ಕೇರಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ತಡಿಯಂಗಡ ಶಶಿ ಸುಬ್ಬಯ್ಯ ಹಾಗೂ ಉಪಾಧ್ಯಕ್ಷರಾಗಿ ರೈತ ಸಂಘದ ಜಿಲ್ಲಾ ಸಂಚಾಲಕರಾದ ಚಿಮ್ಮಂಗಡ ಗಣೇಶ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ನಿರ್ದೇಶಕರಾಗಿ ಪರಶಿವ, ಮುಕುಂದ, ಸುರೇಶ್, ಮುತ್ತಪ್ಪ, ಬಾಬು, ರಾಮಚಂದ್ರ ಕಾಳ, ಪಾಲಿ, ಮಾಚಿಮಾಡ ಆಶಾ ಆಯ್ಕೆಗೊಂಡಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 11 ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡಿದ್ದರು. ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.