ಕುಶಾಲನಗರ, ಆ. 7: ಕುಶಾಲನಗರ ಸಮೀಪದ ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ‘ಜ್ಞಾನ ಕಾವೇರಿ’ ಸ್ನಾತಕೋತ್ತರ ಕೇಂದ್ರದ ಶೈಕ್ಷಣಿಕ ವರ್ಷ 2018-19 ನೇ ಸಾಲಿನಲ್ಲಿ (ಸಾಮಾನ್ಯ ಮತ್ತು ಪಾವತಿ ವರ್ಗದಡಿ) ಸ್ನಾತಕೋತ್ತರ ಕನ್ನಡ ವಿಭಾಗ, ರಾಜ್ಯಶಾಸ್ತ್ರ ವಿಭಾಗ, ಸಮಾಜಕಾರ್ಯ ವಿಭಾಗ, ಇತಿಹಾಸ ವಿಭಾಗ, ಸಸ್ಯಶಾಸ್ತ್ರ ವಿಭಾಗ, ರಸಾಯನಶಾಸ್ತ್ರ ವಿಭಾಗ, ಗಣಕ ವಿಜ್ಞಾನ ವಿಭಾಗ, ಜೀವರಸಾಯನಶಾಸ್ತ್ರ ವಿಭಾಗ, ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗ, ಪರಿಸರ ವಿಜ್ಞಾನ ವಿಭಾಗ ಸಾಮೂಹಿಕ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಗಳಲ್ಲಿ ಖಾಲಿಯಿರುವ ಸೀಟುಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ತಾ. 10 ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರದ ನಿರ್ದೇಶಕ ಪ್ರೊ. ಬಿ.ಹೆಚ್. ಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿಗಾಗಿ ದೂರವಾಣಿ ಸಂಖ್ಯೆ- 08276-276474, 08276-276485 ಅನ್ನು ಸಂಪರ್ಕಿಸುವಂತೆ ಕೋರಿದ್ದಾರೆ.