ಪೆರಾಜೆ, ಆ. 7: ಪೆರಾಜೆಯ ಚಿಗುರು ಯುವಕ ಮಂಡಲ ಪೆರಾಜೆ ಇದರ ವತಿಯಿಂದ ಶ್ರೀ ಶಾಸ್ತಾವು ದೇವಸ್ಥಾನದ ವಠಾರವನ್ನು ಶ್ರಮದಾನ ಮತ್ತು ಸ್ವಚ್ಛತಾ ಕಾರ್ಯಕ್ರಮದ ಮೂಲಕ ಶುಚಿಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಯುವಕ ಮಂಡಲದ ಅಧ್ಯಕ್ಷ ಶೀತಲ್ ಕುಂಬಳಚೇರಿ, ಉಪಾಧ್ಯಕ್ಷ ಭುವನ್ ಕುಂಬಳಚೇರಿ, ಕಾರ್ಯದರ್ಶಿ ನಿಶಾಂತ್ ಮಜಿಕೋಡಿ, ಖಜಾಂಚಿ ಹರ್ಷಿತ್ ಆರ್. ಮಜಿಕೋಡಿ ಮತ್ತು ನಿರ್ದೇಶಕರು ಅಲ್ಲದೆ 30ಕ್ಕೂ ಹೆಚ್ಚಿನ ಸದಸ್ಯರು ಪಾಲ್ಗೊಂಡಿದ್ದರು. ತದನಂತರ ಯುವಕ ಮಂಡಲದ ತಿಂಗಳ ಸಭೆಯನ್ನು ನಡೆಸಲಾಯಿತು.