ಭಾಗಮಂಡಲ, ಆ. 7: ವನ್ಯಜೀವಿ ಮೀಸಲು ಅರಣ್ಯದಲ್ಲಿ ಬೇಟೆಗೆಂದು ತೆರಳಿದ್ದ ಈರ್ವರನ್ನು ಅರಣ್ಯ ಇಲಾಖೆಯವರು ಬಂಧಿಸಿದ್ದಾರೆ. ತಲಕಾವೇರಿ ವಜ್ಯಜೀವಿ ವಲಯದ ನಾಡುಮಲೆ ಎಂಬಲ್ಲಿ ನಿನ್ನೆ ಬೇಟೆಗೆ ಹೊಂಚು ಹಾಕುತ್ತಿದ್ದ ಚೇರಂಗಾಲ ಬಳಿಯ ಕೋಳಿಕಾಡು ನಿವಾಸಿ, ಲೋಹಿತ್ ಹಾಗೂ ಪದ್ಮಯ್ಯ ಎಂಬವರುಗಳನ್ನು ಸೆರೆ ಹಿಡಿದಿರುವ ಅರಣ್ಯ ಇಲಾಖೆಯವರು ಬಂಧಿತರಿಂದ ಒಂದು ನಾಡ ಕೋವಿ, ಒಂದು ಒಂಟಿ ನಳಿಕೆ ಕೋವಿ, 17 ಮದ್ದುಗುಂಡುಗಳು ಹಾಗೂ ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ನ್ಯಾಯಾಂಗ ವಶಕೊಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಉಮೇಶ್, ಸಚಿನ್, ವಿಜಯ, ಪೂಣಚ್ಚ ಪಾಲ್ಗೊಂಡಿದ್ದರು.