ಗೋಣಿಕೊಪ್ಪ ವರದಿ, ಆ. 7: ಬಿರುನಾಣಿ ಸುಜ್ಯೋತಿ ಶಾಲಾ ಆವರಣದಲ್ಲಿ ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಉಚ್ಚರಣೆ, ಕಿವುಡುತನ ಹಾಗೂ ಕಣ್ಣಿಗೆ ಸಂಬಂಧಿಸಿದ ರೋಗಗಳ ಉಚಿತ ತಪಾಸಣೆ ಶಿಬಿರ ತಾ. 9 ರಂದು ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ಆರಂಭಗೊಳ್ಳಲಿರುವ ಶಿಬಿರದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಉಚಿತವಾಗಿ ತಪಾಸಣೆ ನಡೆಸಲಾಗವದು. ಹೆಚ್ಚಿನ ಮಕ್ಕಳಲ್ಲಿ ಕಿವುಡುತನ ಸಮಸ್ಯೆ ಕಾಡುತ್ತಿರುವದನ್ನು ಗಮನಿಸಿ ಉಚಿತ ತಪಾಸಣೆ ನಡೆಸಲಾಗುತ್ತದೆ. ನುರಿತ ತಜ್ಞ ವೈದ್ಯರು ತಪಾಸಣೆ ನಡೆಸಿ ಸಲಹೆ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.