ಮಡಿಕೇರಿ, ಆ. 7: ಮಡಿಕೇರಿಯ ಕಾವೇರಿ ಕಾರು ಚಾಲಕರ ಮತ್ತು ಮಾಲೀಕರ ಸಂಘದ ಆಡಳಿತ ಮಂಡಳಿ ಮಹಾಸಭೆ ಮತ್ತು ಚುನಾವಣೆ ಇತ್ತೀಚೆಗೆ ನಡೆಯಿತು. 2018-19ನೇ ಸಾಲಿಗೆ ಅಧ್ಯಕ್ಷರಾಗಿ ಬದ್ದಂಜೆಟ್ಟಿರ ಜಗದೀಶ್, ಉಪಾಧ್ಯಕ್ಷರಾಗಿ ಸಿದ್ದು ರೆಹಮಾನ್ ಕೆ.ಕೆ., ಕಾರ್ಯದರ್ಶಿಯಾಗಿ ಹರೀಶ್ ಕೆ.ಆರ್., ಖಜಾಂಚಿಯಾಗಿ ಮಂಜುನಾಥ್ ಕೆ.ಕೆ., ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದಂಡ ಕೆ. ಪ್ರತಾಪ್ ಹಾಗೂ ಗೌರವ ಅಧ್ಯಕ್ಷರಾಗಿ ರಫೀಕ್ (ಸನ್ ರೈಸ್) ಹಾಗೂ ಹಿರಿಯ ಸಲಹೆಗಾರರಾಗಿ ಮುಸ್ತಾಫ, ಜಿಇಸಿ ಮತ್ತು ನಾಗೇಶ್ ಕೆ.ಆರ್. ಅವರುಗಳು ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ನೂತನ ಸದಸ್ಯರಾಗಿ ಸುಂದರ ಬಂಗೇರ, ನೂರ್ ಅಹಮ್ಮದ್, ಖಾದರ್ ಎಂ.ಕೆ., ಸತೀಶ್ ಬಿ.ಎಸ್., ಹುನೈಜ್, ಸಂತೋಷ್ ಕೆ.ಕೆ., ಲತೀಫ್, ಕುಯ್ಯಮುಡಿ ರಾಜೇಶ್, ಇರ್ಷಾದ್ (ಇಚ್ಚ), ರಾಜೇಶ್ ಮಲ್ಲನ ಸತೀಶ್ ಕೆ.ಎಲ್., ಗೌತಮ್, ಕುಮಾರ್, ಮುಕಂದರ್ ಮತ್ತು ಗಿರಿ ರಾಮಯ್ಯ ಆಯ್ಕೆಯಾಗಿದ್ದಾರೆ.