ಕುಶಾಲನಗರ, ಆ. 7: ಕುಶಾಲನಗರ ಕಾರು ಮಾಲೀಕರು ಮತ್ತು ಚಾಲಕರ ಸಂಘದ ನೂತನ ಸಾಲಿನ ಅಧ್ಯಕ್ಷರಾಗಿ ಎನ್.ಕೆ. ತಮ್ಮಯ್ಯ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ನೂತನ ಸಾಲಿನ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಜಾನ್ ಮೆನೇಜಸ್, ಉಪಾಧ್ಯಕ್ಷರಾಗಿ ಹೆಚ್.ಎಂ. ಚಂದ್ರು, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಸ್. ರಾಘವೇಂದ್ರ, ಸಹ ಕಾರ್ಯದರ್ಶಿಯಾಗಿ ಎಂ.ಎನ್. ಶ್ರೀನಿವಾಸ, ಖಜಾಂಚಿಯಾಗಿ ಪದ್ಮಪ್ಪ ಪೂಜಾರಿ, ನಿರ್ದೇಶಕರು ಗಳಾಗಿ ಕೆ.ಬಿ. ಸುರೇಶ್, ಜೈನೋ ವರ್ಗಿಸ್, ಡಿ.ಪಿ. ಸೋಮಶೇಖರ್, ಬಿ.ಎಂ. ರವಿ, ಎ.ಡಿ. ಪುನಿತ್, ನಿಸಾರ್ ಅಹಮ್ಮದ್, ಸಲಹೆಗಾರರಾಗಿ ಡಿ.ಕೆ. ತಿಮ್ಮಪ್ಪ, ಡಿ. ವಿಶ್ವನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.