ಮಡಿಕೇರಿ, ಆ. 6: ಗೌಡ ನಾಗರಿಕರ ಹುತ್ತರಿ ಸಮಿತಿ ವತಿಯಿಂದ ಕಳೆದ 10 ವರ್ಷಗಳಿಂದ ಹುತ್ತರಿ ಕದಿರು ಕುಯ್ಯುವ ಕಾರ್ಯಕ್ರಮ ನಡೆದು ಬಂದಿದ್ದು, ಇದೀಗ 2018ನೇ ಸಾಲಿನ ಹುತ್ತರಿ ಹಬ್ಬಕ್ಕೆ ಕೊಡಗು ಗೌಡ ವಿದ್ಯಾ ಸಂಘದ ಆವರಣದಲ್ಲಿ ಇತ್ತೀಚೆಗೆ ಗದ್ದೆ ನಾಟಿ ಮಾಡಲಾಯಿತು.
ಈ ಸಂದರ್ಭ ಸಮಿತಿಯ ಅಧ್ಯಕ್ಷ ಪರಿವಾರ ಅಪ್ಪಾಜಿ, ಖಜಾಂಚಿ ಪೊನ್ನಚನ ಸೋಮಣ್ಣ, ಸಂಚಾಲಕರಾದ ಚೆರಿಯಮನೆ ತಿಮ್ಮಯ್ಯ, ಪಾಣತ್ತಲೆ ಬಿದ್ದಪ್ಪ, ಪೊನ್ನೇಟಿ ಚಿನ್ನಪ್ಪ, ಕೋಡಿ ಮುತ್ತಪ್ಪ, ನಡುಮನೆ ಕಾರ್ಯಪ್ಪ, ಸೂದನ ಹರೀಶ್, ಮೊಟ್ಟೇರ ಬೆಳ್ಯಪ್ಪ, ಪೂಜಾರೀರ ಬೆಳ್ಯಪ್ಪ, ಕುಂಬುಗೌಡನ ಭೀಮಯ್ಯ, ವಿದ್ಯಾಸಂಘದ ವ್ಯವಸ್ಥಾಪಕ ಮತ್ತಾರಿ ರಮೇಶ್, ಕಡ್ಯದ ದಿನೇಶ್ ಹಾಜರಿದ್ದರು.