ಮಡಿಕೇರಿ, ಆ. 6: ರಕ್ಷಣಾ ಲೆಕ್ಕ ಪರಿಶೋದನಾ ಪ್ರಧಾನ ನಿಯಂತ್ರಕರು ಅಲಹಾಬಾದ್, ಇವರು ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ, ಮಿಲಿಟರಿ ಪಿಂಚಣಿ ಪಡೆಯುತ್ತಿರುವ ಮಾಜಿ ಸೈನಿಕರು, ಮಾಜಿ ಸೈನಿಕರ ಅವಲಂಬಿತರು ಹಾಗೂ ರಕ್ಷಣಾ ಸಿವಿಲ್ ಪಿಂಚಣಿ ಪಡೆಯುತ್ತಿರುವವರಿಗೆ, ಪಿಂಚಣಿಗೆ ಸಂಬಂಧಿಸಿದ ಯಾವದೇ ನ್ಯೂನತೆಗಳು ಇದ್ದಲ್ಲಿ ಅವುಗಳನ್ನು ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ಸಲುವಾಗಿ ಪಿಂಚಣಿ ಅದಾಲತ್ ಅನ್ನು ಆಗಸ್ಟ್ 23 ಮತ್ತು 24 ರ ಬೆಳಗ್ಗೆ 8 ಗಂಟೆಗೆ ಮೈಸೂರಿನ ಕರ್ನಾಟಕ ಕಲಾಮಂದಿರ, ವಿನೋಭಾ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ವಾಸಿಸುತ್ತಿರುವ ಮಾಜಿ ಸೈನಿಕರು ಹಾಗೂ ಮಾಜಿ ಸೈನಿಕರ ಅವಲಂಬಿತರು ತಮ್ಮ ಪಿಂಚಣಿಯ ನ್ಯೂನತೆಗಳ ನಿವಾರಣೆಗೆ ಮುಂಚಿತವಾಗಿ ಅರ್ಜಿಯನ್ನು ಪೂರ್ಣಗೊಳಿಸಿ ಪೆನ್‍ಶನ್ ಪೇಮೆಂಟ್ ಆರ್ಡರ್, ಪಿಂಚಣಿ ಪಡೆಯುತ್ತಿರುವ ಖಜಾನೆ, ಬ್ಯಾಂಕಿನ ವಿವರವುಳ್ಳ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ಇಮೇಲ್ ಠಿeಟಿsioಟಿಚಿಜಚಿಟಣ@gmಚಿiಟ.ಛಿom ಗೆ ಅಥವಾ ಪ್ಯಾಕ್ಸ್ ನಂ 0532-242173 ಗೆ ಕಳುಹಿಸಬಹುದಾಗಿದೆ. ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08272-229866 ಹಾಗೂ ಜಂಟಿ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮಡಿಕೇರಿ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.