ಗೋಣಿಕೊಪ್ಪಲು, ಆ. 6: ಇಲ್ಲಿನ ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ “ಸ್ವಚ್ಛತಾ ಸಪ್ತಾಹ” ಪ್ರಯುಕ್ತ ವಿದ್ಯಾರ್ಥಿಗಳಿಗೆ ಉಪ ಪ್ರಾಂಶುಪಾಲೆ ಪ್ರೊ. ಎ.ಎಂ. ಕಮಲಾಕ್ಷಿ ಸ್ವಚ್ಛತಾ ಪ್ರಮಾಣ ಬೋಧಿಸಿದರು.
ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಸ್ವಚ್ಛತೆಯ ಜೊತೆಗೆ ಮನೆ ಹಾಗೂ ಕಾಲೇಜಿನ ಆವರಣವನ್ನು ಸ್ವಚ್ಛವಾಗಿಡುವದರ ಮೂಲಕ ಕನಿಷ್ಟ ವರ್ಷದಲ್ಲಿ ನೂರು ಗಂಟೆಗಳ ಕಾಲ ಸ್ವಚ್ಛತೆಗೆ ಶ್ರಮಿಸಬೇಕು ಎಂದು ಹೇಳಿದರು. ಕಾಲೇಜಿನಲ್ಲಿ ಸ್ವಚ್ಛತಾ ಸಪ್ತಾಹವನ್ನು ಮುಂದಿನ ಹದಿನೈದು ದಿನಗಳವರೆಗೆ ಆಚರಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಯೋಜನಾಧಿಕಾರಿ ಎಂ.ಎನ್. ವನಿತ್ ಕುಮಾರ್, ಎನ್.ಪಿ. ರೀತಾ ಹಾಗೂ ರೆಡ್ ಕ್ರಾಸ್ ಸಂಚಾಲಕಿ ಸಿ.ಟಿ. ಕಾವ್ಯ ಉಪಸ್ಥಿತರಿದ್ದರು.