ಸೋಮವಾರಪೇಟೆ, ಆ. 6: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಾಗಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಪಂಚಾಯಿತಿ ವತಿಯಿಂದ ಶೇ. 24.1ರ ಯೋಜನೆಯಡಿ ವಿವಿಧ ಸಲಕರಣೆಗಳನ್ನು ವಿತರಿಸ ಲಾಯಿತು.
ರೂ. 92 ಸಾವಿರ ವೆಚ್ಚದಲ್ಲಿ ರೈನ್‍ಕೋಟ್, ಷೂ, ಮಾಸ್ಕ್, ಹ್ಯಾಂಡ್ ಗ್ಲೌಸ್ ಮತ್ತಿತರ ಪರಿಕರಗಳನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ವಿತರಿಸಿದರು. ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ ಶೆಟ್ಟಿ, ಸದಸ್ಯರಾದ ಕೆ.ಎ. ಆದಂ, ಲೀಲಾ ನಿರ್ವಾಣಿ, ಸುಶೀಲಾ, ಬಿ.ಎಂ. ಈಶ್ವರ್, ಬಿ.ಸಿ. ವೆಂಕಟೇಶ್, ಮೀನಾಕುಮಾರಿ, ಬಿ.ಎಂ. ಸುರೇಶ್, ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯಾಧಿಕಾರಿ ಉದಯಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.