ಮಡಿಕೇರಿ, ಆ. 6: ನಿನ್ನೆ ನಡುರಾತ್ರಿ ಮೋದೂರು ತೋಟದ ಮನೆ ಆವರಣಕ್ಕೆ ಆನೆಗಳು ಲಗ್ಗೆ ಇಟ್ಟಿವೆ. ಹೂದಾನಿಗಳು, ಕಬ್ಬಿಣದ ತಡೆಗೋಡೆ, ಸಿಮೆಂಟ್ ಕಂಬಗಳನ್ನೆಲ್ಲ ಉರುಳಿಸಿ ನಷ್ಟಮಾಡಿದೆ.

ಚಾಲಕನ ಮನೆಯ ಬಳಿಯೂ ತೆರಳಿ ನೀರಿನ ಟ್ಯಾಂಕ್ ಇತ್ಯಾದಿ ಧ್ವಂಸ ಮಾಡಿವೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ತೋಟದ ಮಾಲೀಕ ಬಿ.ಎಸ್. ಪೂಣಚ್ಚ, ಕೊಡಗಿನಲ್ಲಿ ಆನೆ ಹಾವಳಿ ‘ಜ್ಯೂರಾಸಿಕ್ ಪಾರ್ಕ್’ ಸಿನೆಮಾದಂತೆ ಆಗುತ್ತಿದೆ. ಇಲ್ಲಿ ಡೈನಸಾರ್ ಬದಲು ಆನೆಗಳಿದ್ದು, ಜೀವ ರಕ್ಷಣೆಗೆ ಮಾನವರು ಪಂಜರದೊಳಗೆ ಬದುಕುವ ಕಾಲ ಎದುರಾದೀತು ಎಂದಿದ್ದಾರೆ. ಮೋದೂರು ವಿಭಾಗದಲ್ಲಿ ಸಾಕಷ್ಟು ಮನೆಗಳು, ಮಹಿಳೆಯರು, ಮಕ್ಕಳು, ಕಾರ್ಮಿಕರು ವಾಸಿಸುತ್ತಿದ್ದು, ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದಿದ್ದಾರೆ.