ಕೂಡಿಗೆ, ಆ. 5: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ದಿಡ್ಡಳ್ಳಿ ಆದಿವಾಸಿ ಕೇಂದ್ರಕ್ಕೆ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಹಾಗೂ ಉಪಾಧ್ಯಕ್ಷ ಗಿರೀಶ್ ಕುಮಾರ್, ಸದಸ್ಯರು, ಅಭಿವೃದ್ಧಿ ಅಧಿಕಾರಿ ಸ್ವಾಮಿನಾಯಕ್ ಭೇಟಿ ನೀಡಿದರು.
ಈ ಸಂದರ್ಭ ಕೇಂದ್ರದಲ್ಲಿರುವ 350 ಕುಟುಂಬದ ಸದಸ್ಯರುಗಳ ಮನೆಗಳ ಮಾಹಿತಿ, ಕುಟುಂಬದ ಸದಸ್ಯರುಗಳ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾನದ ಗುರುತಿನ ಚೀಟಿಗಳ ನಕಲು ಪ್ರತಿ ಪಡೆಯಲಾಯಿತು. ಈ ಎಲ್ಲಾ ಮಾಹಿತಿ ಗ್ರಾಮ ಪಂಚಾಯಿತಿ ಜಿಪಿ ಕೇಂದ್ರಕ್ಕೆ ನೋಂದಣಿ ಮಾಡುವ ಕಾರ್ಯಕ್ಕೆ ಅಧ್ಯಕ್ಷೆ ಪ್ರೇಮಲೀಕಾ ಚಾಲನೆ ನೀಡಿದರು.