ಮಡಿಕೇರಿ, ಆ. 5: ಪ್ರಸಕ್ತ (2018-19) ಸಾಲಿನಲ್ಲಿ ಮಡಿಕೇರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಖಾಲಿ ಉಳಿದಿರುವ ಸೀಟುಗಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಎಲೆಕ್ಟ್ರೀಷಿಯನ್ 6, ಎಲೆಕ್ಟ್ರಾನಿಕ್ ಮೆಕಾನಿಕ್ 9, ಫಿಟ್ಟರ್ 29, ಮೆಕಾನಿಸ್ಟ್ 9, ಒಟ್ಟಾಗಿ 53 ಸ್ಥಾನಗಳು ಖಾಲಿ ಉಳಿದಿದ್ದು ನೇರವಾಗಿ ಭರ್ತಿ ಮಾಡಲು ತಾ. 4 ರಿಂದ 13 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.