ಮಡಿಕೇರಿ, ಆ. 3: ಸಾಯಿಶಂಕರ್ ವಿದ್ಯಾಸಂಸ್ಥೆ, ಪ್ರಶಾಂತಿ ನಿಲಯ, ಪೊನ್ನಂಪೇಟೆಯಲ್ಲಿ ಶಾಲಾ-ಕಾಲೇಜು ವಿಭಾಗದಿಂದ ಆಯ್ಕೆಯಾದ ವಿವಿಧ ವಿಭಾಗದ ವಿದ್ಯಾರ್ಥಿ ನಾಯಕ-ನಾಯಕಿಯರ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಅರಣ್ಯ ಕಾಲೇಜಿನ ಮುಖ್ಯಸ್ಥ ಡಾ. ಸಿ.ಜಿ. ಕುಶಾಲಪ್ಪ ಹಾಗೂ ಕೊಡಗು ಜಿಲ್ಲಾ ಹಿತಾರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ, ನಿಟ್ಟೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಅರಮಣಮಾಡ ಸತೀಶ್, ಸಾಯಿಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಝರು ಗಣಪತಿ, ನಿರ್ದೇಶಕ ಗ್ರೀಟಾ ಅಪ್ಪಣ್ಣರವರು, ಡಿ.ಎಡ್-ಬಿ.ಎಡ್ ವಿಭಾಗದ ಪ್ರಾಂಶುಪಾಲ ನಾರಾಯಣ್, ಕಾಲೇಜು ವಿಭಾಗದ ಪ್ರಾಂಶುಪಾಲೆ ದಶಮಿ, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಲತಾ ಚಂಗಪ್ಪ ಹಾಗೂ ಪೋಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಯಕ-ನಾಯಕಿಯರಿಗೆ ಪದಗ್ರಹಣ ಪದಕಗಳನ್ನು ಅತಿಥಿಗಳು ನೀಡಿದರು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಮುಖ್ಯೋಪಾಧ್ಯಾಯರು ಬೋಧಿಸಿದರು. ಶಾಲೆಯ ಮುಖ್ಯ ನಾಯಕಿ ಮಾನ್ಯ ಮುತ್ತಮ್ಮ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿ ನಾಯಕ ಕಾರ್ಯಪ್ಪ ನಾಯಕತ್ವದ ಬಗ್ಗೆ, ತಮ್ಮ ಕರ್ತವ್ಯದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿ ಶಿವರಂಜಿನಿ ಪ್ರಾರ್ಥಿಸಿದರೆ, ಉಪನ್ಯಾಸಕಿ ಚೋಂದಮ್ಮ ಸ್ವಾಗತಿಸಿದರು. ಶಿಕ್ಷಕಿ ನಸೀಬಾ ಖಾನಂ ಕಾರ್ಯಕ್ರಮ ನಿರೂಪಿಸಿದರೆ, ಶಿಕ್ಷಕಿ ಕಾವೇರಮ್ಮ ವಂದಿಸಿದರು.