ಶನಿವಾರಸಂತೆ, ಆ. 3: ಆಟೋ ರಿಕ್ಷಾವೊಂದು ಬೈಕ್ಗೆ ಡಿಕ್ಕಿಯಾದ ಪರಿಣಾಮ ಬೈಕ್ನ ಹಿಂಬದಿ ಸವಾರನ ಬಲಗೈಯ ಕಿರು ಬೆರಳು ತುಂಡಾದ ಘಟನೆ ಸಮೀಪದ ಬಿಳಹ ಗ್ರಾಮದ ಜಂಕ್ಷನ್ನಲ್ಲಿ ನಡೆದಿದೆ.
ಚಂದ್ರು ಎಂಬಾತ ಚಾಲಿಸುತ್ತಿದ್ದ ಆಟೋ ರಿಕ್ಷಾ, ಕಾಂತರಾಜ್ ಚಾಲಿಸುತ್ತಿದ್ದ ಬೈಕ್ಗೆ ಡಿಕ್ಕಿಯಾಗಿದ್ದು, ಪರಿಣಾಮ ಬೈಕ್ನ ಹಿಂಬದಿ ಕುಳಿತಿದ್ದ ಪ್ರಶಾಂತ್ ಎಂಬಾತನ ಬಲಗೈ ಕಿರು ಬೆರಳು ತುಂಡಾಗಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.