ಸುಂಟಿಕೊಪ್ಪ, ಆ.3: ಸರಕಾರಿ ಪದವಿಪೂರ್ವ ಕಾಲೇಜಿಗೆ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ಕಾಲೇಜು ಆಡಳಿತ ಮಂಡಳಿಯೊಂದಿಗೆ ಭೇಟಿ ನೀಡಿ ತಡೆಗೋಡೆ, ಹಾಗೂ ಕಟ್ಟಡ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಸರಕಾರಿ ಪದವಿಪೂರ್ವ ಕಾಲೇಜಿಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿದ ಶಾಸಕ ಅಪ್ಪಚ್ಚು ರಂಜನ್ ಅವರು ಕಾಲೇಜು ಕಟ್ಟಡದ ಬರೆ ಕುಸಿತಕ್ಕೊಳಗಾಗಿ ತಡೆಗೋಡೆ ಕಾಮಗಾರಿಯು ಪ್ರಗತಿಯಲ್ಲಿದ್ದು ಕಾಮಗಾರಿ ಗುಣಮಟ್ಟ ಪರಿಶೀಲಿಸಿದರು. ನೂತನ ಕಟ್ಟಡ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದ್ದನ್ನು ಆರಿತ ಅವರು ಗುತ್ತಿಗೆದಾರನಿಗೆ ದೂರವಾಣಿಗೆ ಕರೆಮಾಡಿ ಕೂಡಲೇ ಕಾಮಗಾರಿಯನ್ನು ಆರಂಭಿಸಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಈ ಸಂದರ್ಭ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವೈ.ಎಂ.ಕರುಂಬಯ್ಯ, ಕಾಲೇಜು ಪ್ರಾಂಶುಪಾಲರಾದ ಜಾನ್, ಖಜಾಂಜಿ ಆರ್.ರಮೇಶ್ ಪಿಳ್ಳೆ, ದಾಸಂಡ ರಮೇಶ್ ಚಂಗಪ್ಪ ಮತ್ತಿತರರು ಇದ್ದರು.