ಮಡಿಕೇರಿ, ಆ. 3: ಕೊಡಗಿನ ಕಾಫಿ ತೋಟಗಳಲ್ಲಿ ಕೆಲವು ಹೊಟೇಲುಗಳಲ್ಲಿ ಅಸ್ಸಾಂ ಮೂಲದವರೆಂದು ಹೇಳುತ್ತಾ ನಕಲಿ ದಾಖಲೆಗಳನ್ನು ಸೃಷ್ಠಿಸಿ ಕೊಂಡು ಬಾಂಗ್ಲಾ ದೇಶದ ಪ್ರಜೆಗಳು ಕೊಡಗಿನಲ್ಲಿ ಕಾಫಿ ತೋಟವಿರುವದರಿಂದ ಕೆಲವು ಕಾಫಿ ತೋಟಗಳಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಅಂತವರನ್ನು ಇಲ್ಲಿಂದ ತೆರವು ಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸುಂಟಿಕೊಪ್ಪ ಹೋಬಳಿ ಘಟಕ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಅಸ್ಸಾಂ ಮೂಲದವರೆಂದು ಹೇಳುತ್ತಾ ಅಕ್ರಮವಾಗಿ ಬಂದ ವಲಸಿಗರು ಕೊಡಗಿನಾದ್ಯಂತ ಕೆಲವು ಕಾಫಿ ತೋಟಗಳಲ್ಲಿ ಹೊಟೇಲುಗಳಲ್ಲಿ ನೆಲೆಸಿದ್ದು ಇವರನ್ನು ತೋಟದ ಮಾಲೀಕರು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಇಲ್ಲೇ ಹುಟ್ಟಿ ಬೆಳೆದು ಕಾರ್ಮಿPರಾಗಿ ಜೀವನ ಮಾಡುತ್ತಿದ್ದವರಿಗೆ ಕೆಲಸವಿಲ್ಲದೆ ಪರದಾಡುವಂತ್ತಾಗಿದೆ. ಅಲ್ಲದೆ ಕೆಲವು ವರ್ಷದ ಹಿಂದೆ ವೀರಾಜಪೇಟೆ ತಾಲೂಕಿನ ಗ್ರಾಮವೊಂದರಲ್ಲಿ ಅಸ್ಸಾಂ ಮೂಲದವರು ತೋಟವೊಂದರ ಗೇಟ್‍ಗೆ ಸ್ಪೋಟಕ ವಸ್ತುವನ್ನು ಇಟ್ಟು ಸಿಡಿಸಿ ಪರಾರಿಯಾಗಿರುವದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಇಲ್ಲಿನ ಮಧ್ಯವರ್ತಿಗಳು ತಮ್ಮ ಲಾಭಕೋಸ್ಕರ ಅಕ್ರಮ ವಲಸಿಗರನ್ನು ಕಾಫಿ ತೋಟಗಳಿಗೆ ಕರೆದುಕೊಂಡು ಬಂದು ಬಿಡುತ್ತಿದ್ದು ಇದರಿಂದ ಮುಂದೆ ಭಾರೀ ಅನಾಹುತ ಆಗುವ ಸಾದ್ಯತೆ ಇದೆ. ಈಗಾಗಲೇ ಅಸ್ಸಾಂ ಮೂಲzವರು ಇಲ್ಲಿನ ಗುರುತಿನ ಚೀಟಿ ಆಧಾರ್ ಕಾರ್ಡ್ ಪಡೆದಿರುತ್ತಾರೆ ಎನ್ನಲಾಗಿದೆ. ಆದುದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ಸೂಕ್ತ ತನಿಖೆ ನಡೆಸಿ ರಾಜಧಾನಿ ಬೆಂಗಳೂರಿನಲ್ಲಿ ಬಾಂಗ್ಲಾದೇಶಿಗಳನ್ನು ಹೊರ ಕಳುಹಿಸುವಂತೆ ಕೊಡಗಿನಲ್ಲಿಯೂ ಕೂಡ ಈ ಕೆಲಸ ಮಾಡಬೇಕು ಅಲ್ಲದೆ ಮಧ್ಯವರ್ತಿಗಳ ಮೇಲೆ ಸೂಕ್ತ ಕ್ರಮ ಕೈ ಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾಗೇಶ್ ಪೂಜಾರಿ, ಉಪಾಧ್ಯಕ್ಷ ಅಶೋಕ, ಪ್ರಧಾನÀ ಕಾರ್ಯದರ್ಶಿ ದಿನು(ಸಂತೋಷ್), ಸದಸ್ಯರಾದ ಮಂಜು, ಕನೀಶ್,ಇತರರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.