ಮಡಿಕೇರಿ, ಆ. 2: ಹಿರಿಯ ನಾಗರಿಕರಿಗೊಂದು ಸಿಹಿ ಸುದ್ದಿ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಏರ್ ಇಂಡಿಯಾ ವಿಮಾನ ಪ್ರಯಾಣದಲ್ಲಿ ಶೇ. 50 ಅಂದರೆ ಅರ್ಧ ಭಾಗದಷ್ಟು ಪ್ರಯಾಣ ದರದಲ್ಲಿ ರಿಯಾಯಿತಿ ಘೋಷಿಸಿದೆ. ಭಾರತದ ಖಾಯಂ ಪ್ರಜೆಯಾಗಿದ್ದು, 60 ವರ್ಷ ಮೇಲ್ಪಟ್ಟವರಿಗೆ ಈ ಸೌಲಭ್ಯ ದೊರಕಲಿದೆ. ಜನ್ಮ ದಿನಾಂಕವನ್ನು ದೃಢಪಡಿಸುವ ಯಾವದಾದ ರೊಂದು ಗುರುತಿನ ಚೀಟಿ ಯೊಂದಿಗೆ ಪ್ರಯಾಣಕ್ಕೆ 7 ದಿನ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕಿದೆ. ದೇಶದ ಯಾವದೇ ಭಾಗದಲ್ಲಿ ಸಂಚರಿಸಬಹುದಾಗಿದ್ದು, ಟಿಕೆಟ್ ದೊರೆತ ಬಳಿಕ ಒಂದು ವರ್ಷದವರೆಗೆ ಈ ಸೌಲಭ್ಯ ಸಿಗಲಿದೆ.