ಮಡಿಕೇರಿ, ಆ.2 : ಅಂತರ್ರಾಷ್ಟ್ರೀಯ ರೋಟರಿ ಫೌಂಡೇಶನ್ ಮತ್ತು ಅಮೇರಿಕಾದ ರಿಚ್‍ಮಂಡ್‍ನ ಜೇಮ್‍ವರ್ ರಿವರ್ ಕ್ಲಬ್‍ನ ವತಿಯಿಂದ ಕುಶಾಲನಗರ ರೋಟರಿ ಸಂಸ್ಥೆಗೆ ಲಭ್ಯವಾದ 63,96,498 ರೂ.ಗಳ ಬೃಹತ್ ನಿಧಿಯಿಂದ ಮಡಿಕೆÉೀರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಸುಸಜ್ಜಿತ ಮತ್ತು ವಿಶ್ವದರ್ಜೆಯ ಶಸ್ತ್ರಚಿಕಿತ್ಸಾ ಕೊಠಡಿಯ ಪರಿಕರಗಳನ್ನು ಅಳವಡಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭ ತಾ. 10 ರಂದು ಸಂಜೆ 5 ಗಂಟೆಗೆ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಆಸ್ಪತ್ರೆಯ ಆಡಳಿತ ಮಂಡಳಿಯ ಕೋರ್ ಕಮಿಟಿ ಅಧ್ಯಕ್ಷ ಕೆ.ಎಸ್. ದೇವಯ್ಯ ಅವರು ಈ ಬಗ್ಗೆ ಮಾತನಾಡಿ, ಅಶ್ವಿನಿ ಆಸ್ಪತ್ರೆ ಸಾರ್ವಜನಿಕರ ಆರೋಗ್ಯ ಸಮಸ್ಯೆಗಳಿಗೆ ಅಗತ್ಯ ಚಿಕಿತ್ಸೆಯನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಈ ಆಸ್ಪತ್ರೆಯನ್ನು ‘ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ’ಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನಿರಿಸಲಾಗುತ್ತಿದೆಯೆಂದು ತಿಳಿಸಿದರು.ಕುಶಾಲನಗರ ರೋಟರಿ ಕ್ಲಬ್ ಅಧ್ಯಕ್ಷ ಜೇಕಬ್ ಕೆ.ಎಂ. ಮಾತನಾಡಿ, ಕುಶಾಲನಗರ ರೋಟರಿ ಕ್ಲಬ್ ವತಿಯಿಂದ 2016-17ನೇ ಸಾಲಿನಲ್ಲಿ ವಿಶ್ವ ಅನುದಾನ ಯೋಜನೆಯಲ್ಲಿ ಅಂತರ್ರಾಷ್ಟ್ರೀಯ ದತ್ತಿನಿಧಿ ಬೃಹತ್ ಅನುದಾನವನ್ನು ಕೋರಲಾಗಿ, 2017-18ನೇ ಸಾಲಿನಲ್ಲಿ ಅಮೇರಿಕದ ರಿಚ್‍ಮಂಡ್‍ನ ಜೇಮ್‍ವರ್ ರಿವರ್ ಕ್ಲಬ್‍ನ ಅಂದಿನ ಅಧ್ಯಕ್ಷರಾದ ಮೂಲತಃ ಕೊಡಗಿನವರಾದ ಬಲ್ಲಚಂಡ ಅಪ್ಪಯ್ಯ ಅವರು
(ಮೊದಲ ಪುಟದಿಂದ) ಅಮೇರಿಕಾದ ಸುಮಾರು 22 ಕ್ಲಬ್‍ಗಳನ್ನು ವಿನಂತಿಸಿ ಹಾಗೂ 9 ಮಂದಿಯ ವೈಯಕ್ತಿಕ ನೆರವು ಹಾಗೂ ರೋಟರಿ ದತ್ತಿನಿಧಿ ಸೇರಿದಂತೆ 63,96,499 ರೂ. ಗಳ ಬೃಹತ್ ನಿಧಿಯನ್ನು ಕುಶಾಲನಗರ ರೋಟರಿಗೆ ನೀಡಲಾಗಿತ್ತು. ಈ ನೆರವನ್ನು ಸದುಪಯೋಗ ಪಡಿಸಲು ಮಡಿಕೇರಿಯ ಅಶ್ವಿನಿ ಆಸ್ಪತ್ರೆಯ ವಿನಂತಿಯ ಮೇರೆಗೆ ಶಸ್ತ್ರಚಿಕಿತ್ಸಾ (ಮೊದಲ ಪುಟದಿಂದ) ಅಮೇರಿಕಾದ ಸುಮಾರು 22 ಕ್ಲಬ್‍ಗಳನ್ನು ವಿನಂತಿಸಿ ಹಾಗೂ 9 ಮಂದಿಯ ವೈಯಕ್ತಿಕ ನೆರವು ಹಾಗೂ ರೋಟರಿ ದತ್ತಿನಿಧಿ ಸೇರಿದಂತೆ 63,96,499 ರೂ. ಗಳ ಬೃಹತ್ ನಿಧಿಯನ್ನು ಕುಶಾಲನಗರ ರೋಟರಿಗೆ ನೀಡಲಾಗಿತ್ತು. ಈ ನೆರವನ್ನು ಸದುಪಯೋಗ ಪಡಿಸಲು ಮಡಿಕೇರಿಯ ಅಶ್ವಿನಿ ಆಸ್ಪತ್ರೆಯ ವಿನಂತಿಯ ಮೇರೆಗೆ ಶಸ್ತ್ರಚಿಕಿತ್ಸಾ ಪೂರ್ವ ರೋಟರಿ ಜಿಲ್ಲಾ ರಾಜ್ಯಪಾಲ ಡಾ.ನಾಗಾರ್ಜುನ ಹಾಗೂ ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕುಶಾಲನಗರ ರೋಟರಿ ಕ್ಲಬ್‍ನ ಎಸ್.ಕೆ.ಸತೀಶ್, ಕುಶಾಲನಗರ ರೋಟರಿ ಸದಸ್ಯರು ಹಾಗೂ ಅಶ್ವಿನಿ ಆಸ್ಪತ್ರೆಯ ಟ್ರಸ್ಟಿ ಮತ್ತು ಕಾರ್ಯದರ್ಶಿಗಳಾದ ಎ.ಎ. ಚಂಗಪ್ಪ, ಅಶ್ವಿನಿ ಆಸ್ಪತ್ರೆಯ ಟ್ರಸ್ಟಿ ಸಂಪತ್ ಕುಮಾರ್ ಉಪಸ್ಥಿತರಿದ್ದರು.