ಮಡಿಕೇರಿ, ಆ. 2: ಕಾರು ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಮಡಿಕೇರಿಯಿಂದ ಮಕ್ಕಂ ದೂರಿಗೆ ತೆರಳುತ್ತಿದ್ದ ಆಟೋ (ಕೆ.ಎ. 12 ಎ. 2130) ಹಾಗೂ ಮಡಿಕೇರಿಯತ್ತ ಬರುತ್ತಿದ್ದ ನಿಸ್ಸಾನ್ ಕಾರಿನ ನಡುವೆ ಚೆನ್ನಿಕೊಪ್ಪೆ ಎಸ್ಟೇಟ್ ಬಳಿ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಆಟೋ ಚಾಲಕ ತಿಮ್ಮಪ್ಪ, ಪ್ರಯಾಣಿಕರಾದ ಪದ್ಮಾವತಿ, ರಮ್ಯ ಇವರುಗಳು ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಕಾರು ಚಾಲಕ ಪ್ರಭಾಕರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
- ಚಿತ್ರ : ಲಕ್ಕಪ್ಪನ ವಿಜೇತ್