ಮಡಿಕೇರಿ, ಆ. 2: ಸಮರ್ಥ ಕನ್ನಡಿಗರ ಸಂಸ್ಥೆಯ ವತಿಯಿಂದ ತಾ. 5 ರಂದು ಹಿಮವನ ಪ್ರತಿಭಾ ಸಂಗಮ ಎಂಬ ವೈವಿದ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ.

ನಗರದ ಓಂಕಾರ ಸದನದಲ್ಲಿ ಬೆಳಿಗ್ಗೆ 10 ಗಂಟೆಗೆ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. “ಕೈ ದೀವಿಗೆ” ಕವನ ಸಂಕಲನವನ್ನು ಗಮಕ ವ್ಯಾಖ್ಯಾನಕಾರ ಕೃ.ಪಾ. ಮಂಜುನಾಥ ಲೋಕಾರ್ಪಣೆಗೊಳಿಸಲಿದ್ದಾರೆ. “ವಿವೇಕ ಪಥ” ಮಾಸಿಕ ಪತ್ರಿಕೆಯನ್ನು ಕವಿ ಸಂಗೀತ ರವಿರಾಜ್ ಲೋಕಾರ್ಪಣೆ ಮಾಡಲಿದ್ದಾರೆ.

ಸಮರ್ಥ ಕನ್ನಡಿಗರು ಸಂಸ್ಥೆಯ ಪ್ರಧಾನ ಸಂಚಾಲಕ ಬಸವರಾಜು ಎಸ್. ದೊರೆಸ್ವಾಮಿ ಸಿದ್ದೇಗೌಡ ಉಪಸ್ಥಿತರಿರುವರು. ಬೆಳಿಗ್ಗೆ 11 ಗಂಟೆಯಿಂದ ಪ್ರತಿಭಾ ಸ್ಪರ್ಧೆ ಅಂಗವಾಗಿ 1 ರಿಂದ - 4ನೇ ತರಗತಿ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ ಸ್ಪರ್ಧೆ ಜರುಗಲಿದ್ದು, ಎನ್.ಟಿ. ಬೋಳಾರ್, ಕವಯತ್ರಿ ಕೆ.ಟಿ. ಕೌಶಲ್ಯ, ಸಾಹಿತಿ ಗಿರೀಶ್ ಕಿಗ್ಗಾಲು ಉಪಸ್ಥಿತರಿರುವರು. ಬೆಳಿಗ್ಗೆ 11.30 ಗಂಟೆಗೆ ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಪ್ರಬಂಧ ಸ್ಪರ್ಧೆ ಆಯೋಜಿತವಾಗಿದ್ದು, 5 ರಿಂದ - 7ನೇ ತರಗತಿ ವಿದ್ಯಾರ್ಥಿಗಳಿಗೆ ವಚನಗಾಯನ ಸ್ಪರ್ಧೆ ಜರುಗಲಿದೆ. ಈ ಸಂದರ್ಭ ಕಾವ್ಯ ರಚನೆ ಸ್ಪರ್ಧೆ ಆಯೋಜಿಸಲಾಗಿದೆ. ಮಧ್ಯಾಹ್ನ 12.30 ಗಂಟೆಗೆ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಆಶುಭಾಷಣ ಸ್ಪರ್ಧೆ ಆಯೋಜಿಸಲಾಗಿದೆ.

ಮಧ್ಯಾಹ್ನ 2 ಗಂಟೆಗೆ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ವೈಯಕ್ತಿಕ ವಿಭಾಗ ಕನ್ನಡ ಭಾವಗೀತೆ ಸ್ಪರ್ಧೆ ಜರುಗಲಿದ್ದು, ಮಧ್ಯಾಹ್ನ 3 ಗಂಟೆಗೆ ಕನ್ನಡ ಜಾಗೃತಿ ಕವಿಗೋಷ್ಠಿ ಜರುಗಲಿದೆ. ಮಧ್ಯಾಹ್ನ 3.45 ಗಂಟೆಗೆ ನಂಬಿಕೆ - ಮೂಡನಂಬಿಕೆ: ಮಾತು -ಕಥೆಯಲ್ಲಿ ಸಂಜೆ 4 ಗಂಟೆಯಿಂದ ದೊಡ್ಡಬಳ್ಳಾಪುರದ ಭಾಸ್ಕರ್ ಎನ್ ಅವರಿಂದ ಪವಾಡ ಬಯಲು ಜಾಗೃತಿ ಕಾರ್ಯಕ್ರಮ ಆಯೋಜಿತವಾಗಿದೆ.

ಸಮರ್ಥ ಕನ್ನಡಿಗರು ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದಲ್ಲಿ 50 ಪ್ರಶಸ್ತಿಗಳನ್ನು ಪಡೆದಿರುವ ಪತ್ರಕರ್ತ ಅನಿಲ್ ಹೆಚ್.ಟಿ. (ಮಾಧ್ಯಮ ಕ್ಷೇತ್ರ) ಸುಬ್ರಾಯ ಸಂಪಾಜೆ, ಆಕಾಶವಾಣಿ ಉದ್ಘೋಷಕರು, ಭಾಗವತರು (ಯಕ್ಷಗಾನ ಮತ್ತು ಕಲೆ, ಸಾಹಿತ್ಯ ಕ್ಷೇತ್ರ) ಮೇಜರ್ ಒಡಿಯಂಡ ಎಸ್. ಚಿಂಗಪ್ಪ (ಅಸಾಧರಣ ದೇಶ ಸೇವೆ ಹಾಗೂ ಸಾಮಾಜಿಕ ಕಳಕಳಿ ಕ್ಷೇತ್ರ ) ಕೃಷ್ಣೇಗೌಡ, ಚೋಳೇನಹಳ್ಳಿ (ಪ್ರಗತಿಪರ ಕೃಷಿ ಮತ್ತು ಕುರಿ ಸಾಕಣೆ ಕ್ಷೇತ್ರ) ಮುಮ್ತಾಜ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ (ಮಹಿಳಾ ಮತ್ತು ಮಕ್ಕಳ ಸಬಲೀಕರಣ ಕ್ಷೇತ್ರ) ಟೋಮಿ ಥೋಮಸ್ (ಕನ್ನಡ ಕಲಿಕೆ ಹಾಗೂ ಜಾಗೃತಿ ಕ್ಷೇತ್ರ) ಎಂ.ಹೆಚ್. ಮೊಹಮ್ಮದ್ ಮುಸ್ತಫ, ಅಧ್ಯಕ್ಷರು, ಮಾನವೀಯ ಚಾರಿಟೇಬಲ್ ಸೊಸೈಟಿ ತನಲ್ (ಮಾನವೀಯ ಸೇವಾ ಕ್ಷೇತ್ರ) ಇವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ .ರಾಜೇಂದ್ರ ಅವರು ಸಮರ್ಥ ಕನ್ನಡಿಗರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.