ಸೋಮವಾರಪೇಟೆ: ಇಲ್ಲಿನ ಲಯನ್ಸ್ ಸಂಸ್ಥೆ ಮತ್ತು ಬಿಟಿಸಿಜಿ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ, ಕಾಲೇಜು ಸಭಾಂಗಣದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.

ಕಾರ್ಯಕ್ರಮವನ್ನು ಲಯನ್ಸ್ ಸಂಸ್ಥೆ ಅಧ್ಯಕ್ಷ ಯೋಗೇಶ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಲಯನ್ಸ್ ಮಾಜೀ ಅಧ್ಯಕ್ಷ ಎ.ಎಸ್. ಮಹೇಶ್, ಕಾರ್ಯದರ್ಶಿ ಮಂಜುನಾಥ್ ಚೌಟ, ಒಕ್ಕಲಿಗರ ಸಂಘದ ನಿರ್ದೇಶಕ ಗಣಪತಿ, ಜಗದೀಶ್, ಕಾಲೇಜು ಪ್ರಾಂಶುಪಾಲ ಚರಣ್ ಅವರುಗಳು ಉಪಸ್ಥಿತರಿದ್ದರು.

ಮೂರ್ನಾಡು: ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಸಂಜೆ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನಿವೃತ್ತ ಬಿಎಸ್‍ಎಫ್ ಕಮಾಂಡೆಂಟ್ ಅಮ್ಮಟಂಡ ಕುಶಾಲಪ್ಪ ಕಾರ್ಗಿಲ್ ವಿಜಯೋತ್ಸವ ಕುರಿತು ಮಾತನಾಡಿ 1999ರ ಮೇ ತಿಂಗಳಿನಿಂದ ಸುಮಾರು 60 ದಿನಗಳ ಕಾಲ ಭಾರತ ಮತ್ತು ಪಾಕಿಸ್ಥಾನ ನಡುವೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಸುಮಾರು ಸೈನಿಕರು ಹುತಾತ್ಮರಾದರು. ದೇಶ ಸೇವೆಗೆ ಯುವಕರು ಸದಾ ಸನ್ನದ್ಧರಾಗಿರಬೇಕು ಎಂದು ಕರೆನೀಡಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಚೇಂಬರ್ ಆಫ್ ಕಾರ್ಮಸ್, ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ, ನವಚೇತನ ಆಟೋ ಚಾಲಕ ಮತ್ತು ಮಾಲೀಕರ ಸಂಘ, ಗಜಾನನ ಯುವಕ ಸಂಘ, ಮೂರ್ನಾಡು ವಿದ್ಯಾಸಂಸ್ಥೆ ಎನ್‍ಸಿಸಿ ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಬಡುವಂಡ ಬೋಪಣ್ಣ, ಕಾರ್ಯದರ್ಶಿ ಮಾಳೇಟಿರ ನವೀನ್ ಕಾರ್ಯಪ್ಪ, ಖಜಾಂಚಿ ಬಡುವಂಡ ಸುಬ್ರಮಣಿ, ಪ್ರೀತಂ ಪೊನ್ನಪ್ಪ, ವೇಣು ಅಪ್ಪಣ್ಣ, ಅರುಣ್ ಅಪ್ಪಚ್ಚು, ಕಾಲೇಜಿನ ಎನ್‍ಸಿಸಿ ಅಧಿಕಾರಿ ಕಾವೇರಪ್ಪ ಇನ್ನಿತರರು ಹಾಜರಿದ್ದರು.

ಗೋಣಿಕೊಪ್ಪ ವರದಿ: ಚೆನ್ನಯ್ಯನಕೋಟೆ ಸರ್ವ ಸಹಾಯಿ ಮಿತ್ರ ಮಂಡಳಿ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಹಾಗೂ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ ಸ್ಮರಣೆ ಕಾರ್ಯಕ್ರಮ ನಡೆಯಿತು. ಸ್ಥಳೀಯ ಮಾಜಿ ಸೈನಿಕ ಸಣ್ಣಯ್ಯ ಅವರನ್ನು ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಪಟ್ಟಣದ ಬಸ್ ನಿಲ್ದಾಣದ ಎದುರು ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ ಭಾವಚಿತ್ರ ಅನಾವರಣಗೊಳಿಸಲಾಯಿತು. ಈ ಸಂದರ್ಭ ಸರ್ವ ಸಹಾಯಿ ಮಿತ್ರ ಮಂಡಳಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಚೆನ್ನಯ್ಯನಕೋಟೆ ಗ್ರಾ.ಪಂ. ಅಧ್ಯಕ್ಷೆ ಗೀತಾ, ಪಿಡಿಓ ರಾಜನ್, ಪೊಲೀಸ್ ಸಹಾಯಕ ಉಪನಿರೀಕ್ಷಕ ವಸಂತ್‍ಕುಮಾರ್, ನವೀನ್ ಕುಮಾರ್, ಇಂದಿರಾ, ಗ್ರಾ.ಪಂ. ಸದಸ್ಯರುಗಳಾದ ಗಣೇಶ್, ಶೀಲಾ, ಶಿಲ್ಪಾ, ವಿಜು, ಜಯಮ್ಮ, ಹೆಚ್.ಬಿ. ಗಣೇಶ್ ಇದ್ದರು.