ಕಾಫಿ ಬೆಳೆಗಾರರ ಸಮಸ್ಯೆ, ಕಾಳುಮೆಣಸು ಆಮದಿ ನಿಂದಾಗುತ್ತಿರುವ ತೊಂದರೆ ಹಾಗೂ ಕಾಡಾನೆ-ಮಾನವ ಸಂಘರ್ಷದ ಕುರಿತು ಕೇಂದ್ರ ಸರಕಾರಕ್ಕೆ ಮತ್ತೆ ಮನವರಿಕೆ ಮಾಡಿಕೊಡಲು ವಿವಿಧ ಬೆಳೆಗಾರರ ಸಂಘ, ಕಾಫಿ ಮಂಡಳಿ ಹಾಗೂ ಜನಪ್ರತಿನಿಧಿಗಳು ದೆಹಲಿಯಲ್ಲಿ ವಿವಿಧ ಇಲಾಖೆಗಳ ಸಚಿವರುಗಳನ್ನು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿದರು.ತಾ. 24 ಮತ್ತು 25 ರಂದು ರಾಜ್ಯದ ಬೃಹತ್ ನಿಯೋಗ ದೆಹಲಿಯಲ್ಲಿ ಸರಕಾರಿ ಮಟ್ಟದಲ್ಲಿ ಬೆಳೆಗಾರರ ಸಮಸ್ಯೆ ಕುರಿತು ಮನವರಿಕೆ ಮಾಡುವ ಪ್ರಯತ್ನ ನಡೆಸಿತು.ಚಿಕ್ಕಮಗಳೂರು - ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಕೊಡಗು - ಮೈಸೂರು ಸಂಸದ ಪ್ರತಾಪ್ ಸಿಂಹ, ಮೂಡಿಗೆರೆ - ತರೀಕೆರೆ - ಕಡೂರು ಕ್ಷೇತ್ರಗಳ ಶಾಸಕರುಗಳಾದ ಎಂ.ಪಿ. ಕುಮಾರಸ್ವಾಮಿ, ಸುರೇಶ್ ತರೀಕೆರೆ, ಬೆಳ್ಳಿ ಪ್ರಕಾಶ್, ಕಾಫಿ ಮಂಡಳಿಯ ಅಧ್ಯಕ್ಷ ಭೋಜೆಗೌಡ, ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಪ್ರಮೋದ್ ಹಾಗೂ ಶಿರೀಶ್ ವಿಜಯೇಂದ್ರ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಜಯರಾಂ ಹಾಗೂ ಎಂ.ಬಿ. ಉದಯ್‍ಕುಮಾರ್, ಕಾಳುಮೆಣಸು ಬೆಳೆಗಾರರ ಒಕ್ಕೂಟದ ಸಮನ್ವಯ ಸಮಿತಿಯ ಕೆ.ಕೆ. ವಿಶ್ವನಾಥ್ ಮತ್ತು ಪ್ರದೀಪ್ ಪೂವಯ್ಯ, ಬ್ಲ್ಯಾಕ್ ಗೋಲ್ಡ್ ಲೀಗ್ ಸಂಸ್ಥೆಯ ಅಧ್ಯಕ್ಷ ಕೆಂಜಿಗೆ ಕೇಶವ, ಡಾ. ವಿವೇಕ್, ಡಾ. ಸುನೀಲ್ ತಂಗಲೆ ಹಾಗೂ ಮೋಹನ್ ಆಳ್ವಾರೀಸ್ ಇವರುಗಳು ನಿಯೋಗದಲ್ಲಿದ್ದರು.

(ಮೊದಲ ಪುಟದಿಂದ) ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು, ಕೃಷಿ ಸಚಿವ ರಾಧಾ ಮೋಹನ್ ಸಿಂಗ್, ಲೋಕಸಭೆಯ ಆರ್ಥಿಕ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ, ಸಾಂಸ್ಥಿಕ ಹಾಗೂ ಕಾರ್ಯಕ್ರಮ ನಿರ್ವಹಣೆಯ ಸಚಿವ ಸದಾನಂದ ಗೌಡ, ರೈಲ್ವೇ ಹಾಗೂ ಹಣಕಾಸು ಸಚಿವ ಪಿಯುಷ್ ಗೋಯಲ್, ಪರಿಸರ ಮತ್ತು ಅರಣ್ಯ ಸಚಿವ ಡಾ. ಹರ್ಷವರ್ಧನ್, ಸಂಸದೀಯ ಸಚಿವ ಅನಂತ್ ಕುಮಾರ್, ಕೃಷಿ ಸಹಾಯಕ ಸಚಿವ ಗಜೇಂದ್ರ ಸಿಂಗ್ ಶಿಕಾವತ್ ಇವರುಗಳನ್ನು ಭೇಟಿ ಮಾಡಿ ಸಮಸ್ಯೆಗಳು ಮತ್ತು ಪರಿಹಾರ ಮಾರ್ಗೋಪಾಯಗಳ ಬಗ್ಗೆ ಮನವಿ ಸಲ್ಲಿಸಿತು.

ಕಾಳುಮೆಣಸಿಗೆ ಕನಿಷ್ಟ ಬೆಂಬಲ ದರ ನಿಗದಿಪಡಿಸುವಂತೆ ಕೋರಲಾಯಿತು.

ಕಾಡಾನೆ ಹಾವಳಿ ತಪ್ಪಿಸಲು ರೈಲ್ವೇ ಕಂಬಿಗಳ ಅಳವಡಿಕೆ ಉಪಯುಕ್ತವಾಗಿದ್ದು, ರೈಲ್ವೇ ಇಲಾಖೆಯು ರೈಲ್ವೇ ಹಳಿಗಳನ್ನು ಅರಣ್ಯ ಇಲಾಖೆಗೆ ಉಚಿತವಾಗಿ ನೀಡುವಂತೆ ವಿನಂತಿಸಲಾಯಿತು.

ಕಾಳುಮೆಣಸು ವ್ಯವಹಾರದಲ್ಲಾಗುತ್ತಿರುವ ಕಾಳ ದಂಧೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವದೆಂದು ಸಂಬಂಧಿತ ಸಚಿವರುಗಳು ಭರವಸೆ ನೀಡಿದರು.

ನಿಯೋಗ ವಿವಿಧ ಸಚಿವರುಗಳಿಗೆ ಸಲ್ಲಿಸಿದ ಮನವಿಯಲ್ಲಿನ ಹಲವು ಅಂಶಗಳು ಈ ಕೆಳಗಿನಂತಿವೆ.

ಕಾಫಿ: ಕಾಫಿ ಬೆಳೆಗಾರರ ಸಾಲವನ್ನು ವಸೂಲಿ ಮಾಡದಂತೆ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚಿಸಬೇಕು.

v 31.3.2018 ರವರೆಗಿನ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು.

v ವಾಣಿಜ್ಯ ಬ್ಯಾಂಕ್‍ಗಳಲ್ಲಿ ಪಡೆದ ಸಾಲಗಳನ್ನು ಮರು ಜೋಡಣೆ ಮಾಡಿ ಶೇ. 6 ಬಡ್ಡಿಯನ್ನು ವಿಧಿಸಬೇಕು.

v ಕೃಷಿ ಸಾಲ / ಅಭಿವೃದ್ಧಿ ಸಾಲಗಳಿಗೆ ರೂ. 25 ಲಕ್ಷದವರೆಗೆ ಶೇ. 3 ರ ಬಡ್ಡಿ ಹಾಗೂ ಹೆಚ್ಚಿನ ಸಾಲಕ್ಕೆ 6 ರ ಬಡ್ಡಿ ವಿಧಿಸಬೇಕು.

v ನಿಯಮ 7ಃ (1) ಅನ್ನು ಅಃಆಖಿ ಯಿಂದ ಕೈಬಿಡಬೇಕು.

v ಸಿಬಿಲ್ ವ್ಯವಸ್ಥೆಯಿಂದ - ಕೃಷಿ ವಲಯವನ್ನು ಹೊರಗಿಡಬೇಕು.

v ಉಳಿಕೆಯಾಗಿರುವ ಸಬ್ಸಿಡಿ ಹಣವನ್ನು ಬಿಡುಗಡೆಗೊಳಿಸಿ, ಹೊಸ ಅರ್ಜಿಗಳನ್ನು ಸ್ವೀಕರಿಸಲು ಕ್ರಮ ಕೈಗೊಳ್ಳಬೇಕು.

ಕರಿಮೆಣಸು: ಡಾ. ಸ್ವಾಮಿನಾಥನ್ ವರದಿಯಂತೆ ಕರಿಮೆಣಸಿಗೆ ಕನಿಷ್ಟ ಬೆಂಬಲ ಬೆಲೆ ನೀಡಬೇಕು.

v ದ್ವಿಪಕ್ಷೀಯ ಒಪ್ಪಂದಗಳನ್ನು ಪುನರ್ ಪರಿಶೀಲಿಸಬೇಕು.

v ಕನಿಷ್ಟ ಆಮದು ದರದ ಕುರಿತು ಎದ್ದಿರುವ ಕಾನೂನು ಸಮರದತ್ತ ಸರಕಾರ ಗಮನ ಹರಿಸಬೇಕು.

v ಚಿಕ್ಕಮಗಳೂರಿನಲ್ಲಿ ಕರಿಮೆಣಸು ಪಾರ್ಕ್ ಸ್ಥಾಪಿಸಬೇಕು.

v ವಿದೇಶದಿಂದ ಕಳ್ಳಸಾಗಾಣೆ ಆಗುತ್ತಿರುವದನ್ನು ಗಮನ ಹರಿಸಬೇಕು.

ಕಾಡಾನೆ ಹಾವಳಿ: ಈ ಬಗ್ಗೆ ಸಮರ್ಥ ನಿರ್ವಹಣೆ ಬೇಕು.

v ಪರಿಹಾರ ನಿಧಿಯಲ್ಲಿ ಏರಿಕೆ

v ತಡೆಬೇಲಿ, ಸೋಲಾರ್ ಬೇಲಿ, ಕಂದಕ ನಿರ್ಮಾಣಗಳ ಬಗ್ಗೆ ಗಮನ ಹರಿಸಬೇಕು.

v ಅಲ್ಲಲ್ಲಿ ಆನೆಗಳ ಕ್ಯಾಂಪ್ ನಿರ್ಮಾಣ

v ಉಗ್ರ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ

v ರ್ಯಾಪಿಡ್ ಟೀಂಗಳ ನೇಮಕ

v ವಯರ್‍ಲೆಸ್ ನೆಟ್‍ವರ್ಕ್ ಮತ್ತು ಕಂಟ್ರೋಲ್ ರೂಂಗಳ ವ್ಯವಸ್ಥೆ

v ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾಯದಂತಹ ವ್ಯವಸ್ಥೆ