ಶ್ರೀಮಂಗಲ, ಜು. 27: ಶ್ರೀಮಂಗಲ ಸಮೀಪ ಕುಮಟೂರು ಗ್ರಾಮದ ಕೊಡವ ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ನಡೆದ ಕೆಸರು ಗದ್ದೆ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಶ್ರೀಮಂಗಲ ಜೂನಿಯರ್ ಕಾಲೇಜು ವಿನ್ನರ್ಸ್ ಹಾಗೂ ಶ್ರೀಮಂಗಲ ಬ್ಲೂಬಾಯ್ಸ್ ತಂಡ ರನ್ನರ್ ಪ್ರಶಸ್ತಿ ಪಡೆಯಿತು. ಹಗ್ಗಜಗ್ಗಾಟದಲ್ಲಿ ಪುರುಷರ ವಿಭಾಗದಲ್ಲಿ ಕುಮಟೂರು ಕಿಂಗ್ಸ್ ವಿನ್ನರ್ಸ್ ಹಾಗೂ ಕಾಕೂರು ಬಿವೈಸಿ ಬಾಯ್ಸ್ ತಂಡ ರನ್ನರ್ಸ್ ಪ್ರಶಸ್ತಿ ಪಡೆಯಿತು.
ಶ್ರೀಮಂಗಲ ಹೋಬಳಿ ವ್ಯಾಪ್ತಿಯ ಕುಟ್ಟ, ಕೆ.ಬಾಡಗ, ನಾಲ್ಕೇರಿ, ಶ್ರೀಮಂಗಲ, ಟಿ.ಶೆಟ್ಟಿಗೇರಿ ಗ್ರಾ.ಪಂ ಒಳಪಟ್ಟ ಸಾರ್ವಜನಿಕರಿಗೂ ಮತ್ತು ಪ್ರಾಥಮಿಕ, ಪ್ರೌಢಶಾಲಾ, ಕಾಲೇಜು ಮಕ್ಕಳಿಗೆ ಕಾಕೂರಿನ ಕ್ರೊಟಂಗಡ ಸುಬ್ರಮಣಿ ಹಾಗೂ ಮನು ಸೋಮಯ್ಯ ಅವರ ಗದ್ದೆಯಲ್ಲಿ ಅಯೋಜಿಸಿದ್ದ ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ ವಿಜೇತ ತಂಡ ಹಾಗೂ ವೈಯಕ್ತಿಕ ಬಹುಮಾನ ಪಡೆದವರಿಗೂ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಲಾಯಿತು.
ಕೆಸರು ಗದ್ದೆ ಓಟ : ಪ್ರಾಥಮಿಕ ಶಾಲೆ, ಬಾಲಕರು 100 ಮೀ. ಕಲಾ, ಸೂರ್ಯ, ವಿಶ್ವ ಅನುಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ, ಶ್ರೀಮಂಗಲ ಪ್ರಾಥಮಿಕ ಶಾಲೆ.
100 ಮೀ ಬಾಲಕಿಯರು : ಕಾವ್ಯ, ಶ್ರೀಮಂಗಲ ಜಿಹೆಚ್‍ಪಿ, ದೇಚಕ್ಕ ಜೆಸಿ ಪ್ರಾಥಮಿಕ, ಶಿಲಾನಿ ಜೆಸಿ ಪ್ರಾಥಮಿಕ.
200 ಮೀ ಬಾಲಕರು : ಸೂರ್ಯ, ಕಲಾ, ವಿಶ್ವ ಶ್ರೀಮಂಗಲ ಜಿಹೆಚ್‍ಪಿ.
200 ಮೀ ಬಾಲಕಿಯರು : ಕಾವ್ಯ ಶ್ರೀಮಂಗಲ ಜಿಹೆಚ್‍ಪಿ, ಗಂಗಮ್ಮ, ಜೆಸಿ ಪ್ರಾಥಮಿಕ, ಶಿಲಾನಿ ಜೆಸಿ ಪ್ರಾಥಮಿಕ.
ಪ್ರೌಢಶಾಲೆ 100 ಮೀ ಬಾಲಕರು : ಕೌಶಿಕ್ ಕಾವೇರಪ್ಪ, ದಿಲನ್ ದೇವಯ್ಯ ರೂಟ್ಸ್ ಟಿ.ಶೆಟ್ಟಿಗೇರಿ, ಮದನ್ ಜೆಸಿ ಪ್ರೌಢಶಾಲೆ ಶ್ರೀಮಂಗಲ.
100 ಮೀ ಬಾಲಕಿಯರು : ರೀಯಾ ಜೆಸಿ ಪ್ರೌಢಶಾಲೆ, ದಿವ್ಯ ಶ್ರೀಮಂಗಲ ಪ್ರೌಢಶಾಲೆ, ನೀಲಮ್ಮ ರೂಟ್ಸ್.
200 ಮೀ ಬಾಲಕರು : ಫೆಬಾಶ್, ರಜೀತ್, ಅಬಿಜೀತ್ ಶ್ರೀಮಂಗಲ ಪ್ರೌಢಶಾಲೆ.
200 ಮೀ ಬಾಲಕಿಯರು : ದಿವ್ಯ, ಜೆಸಿನ್, ಮುತ್ತಮ್ಮ ಶ್ರೀಮಂಗಲ ಪ್ರೌಢಶಾಲೆ.
ಕಾಲೇಜು ವಿಭಾಗ : 100 ಮೀ ಯುವತಿಯರು ಕಮಲ, ಪ್ರೀತು, ಸುಕನ್ಯ ಶ್ರೀಮಂಗಲ ಪದವಿ ಪೂರ್ವ ಕಾಲೇಜು.
ಸಾರ್ವಜನಿಕ ಮಹಿಳಾ ವಿಭಾಗ : ತುಳಸಿ, ಸುನಿತಾ, ಪ್ರಮೀಳಾ.
ವಾಲಿಬಾಲ್ ಸಾರ್ವಜನಿಕ ವಿಭಾಗ ಪುರುಷರು : ಶ್ರೀಮಂಗಲ ಜೂನಿಯರ್ ಕಾಲೇಜು, ಬ್ಲೂಬಾಯ್ಸ್ ಶ್ರೀಮಂಗಲ,
ಪ್ರೌಢಶಾಲೆ ವಿಭಾಗ: ಶ್ರೀಮಂಗಲ ಪ್ರೌಢಶಾಲೆ, ಶ್ರೀಮಂಗಲ ಪ್ರೌಢಶಾಲೆ ಬಿ.
ವಾಲಿಬಾಲ್ ಪ್ರೌಢಶಾಲೆ ವಿಭಾಗ ಬಾಲಕಿಯರು : ಜೆಸಿ ಪ್ರೌಢಶಾಲೆ ಕುಮಟೂರು, ಶ್ರೀಮಂಗಲ ಪ್ರೌಢಶಾಲೆ,
ಹಗ್ಗಜಗ್ಗಾಟ ಸಾರ್ವಜನಿಕ ವಿಭಾಗ ಪುರುಷರು : ಕುಮಟೂರು ಕಿಂಗ್ಸ್ ತಂಡ, ಬಿವೈಸಿ ಬಾಯ್ಸ್ ಕಾಕೂರು.
ಮಹಿಳಾ ವಿಭಾಗ : ಶ್ರೀಮಂಗಲ ತುಳಸಿ ತಂಡ, ಕುಮಟೂರು ಮಹಿಳಾ ತಂಡ,
ಪ್ರೌಢಶಾಲೆ ವಿಭಾಗ ಬಾಲಕರು : ರೂಟ್ಸ್ ಹೈಸ್ಕೂಲ್ ಟಿ.ಶೆಟ್ಟಿಗೇರಿ, ಜೆಸಿ ಹೈಸ್ಕೂಲ್ ಶ್ರೀಮಂಗಲ,
ಬಾಲಕೀಯರ ವಿಭಾಗ : ಜೆಸಿ ಹೈಸ್ಕೂಲ್ ಕುಮಟೂರು, ಶ್ರೀಮಂಗಲ ಜೂನಿಯರ್ ಕಾಲೇಜು.
ಕೆಸರು ಗದ್ದೆ ಓಟ ಸಾರ್ವಜನಿಕ ವಿಭಾಗ ಪುರುಷರು : ವಿನೋದ್ ಕೆ.ಎಸ್, ನಿತೇಶ್ ಕೆ.ಎಂ, ಭರತ್ ಕೆ.ಎಂ.
ಬಹುಮಾನ ಹಾಗೂ ಟ್ರೋಫಿಯನ್ನು ತಾ.ಪಂ ಸದಸ್ಯ ಪೊಯಿಲೇಂಗಡ ಪಲ್ವಿನ್ ಪೂಣಚ್ಚ, ಗ್ರಾ.ಪಂ ಅಧ್ಯಕ್ಷೆ ಚೋಕಿರ ಕಲ್ಪನಾ ತಿಮ್ಮಯ್ಯ ವಿತರಿಸಿದರು.
ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷ ಕಳ್ಳಂಗಡ ರಜಿತ್ ಪೂವಣ್ಣ, ಕೊಡವ ಕ್ಲಬ್ ಸಂಯೋಜಕ ಮಂತ್ರಂಡ ಶರತ್, ತೀತಿರ ಸೂರಜ್, ಮಾದೀರ ಸುದಿ, ಕೊಟ್ರಂಗಡ ತಿಮ್ಮಯ್ಯ, ವಿನೇಶ್, ನಿತೇಶ್, ಸುನಿಲ್ ಸುಬ್ಬಯ್ಯ, ಪೊನ್ನಣ್ಣ, ಹರೀಶ್, ಚಿಂತು ಗಣಪತಿ, ಐಯ್ಯಪ್ಪ ಅವರು ಕಾರ್ಯಕ್ರಮ ಸಂಘಟಿಸಿದರು. ಚೋಕಿರ ಹ್ಯಾರಿ ಬಿದ್ದಪ್ಪ ಕಾರ್ಯಕ್ರಮ ನಿರೂಪಿಸಿದರು.