ಗುಡ್ಡೆಹೊಸೂರು, ಜು. 18: ಇಲ್ಲಿಗೆ ಸಮೀಪದ ದುಬಾರೆಯ ದುಬಾರೆ ಇನ್ ಹೊಟೇಲ್ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಡಿಕೇರಿ ಶಾಖೆ ವತಿಯಿಂದ ಪ್ರಥಮ ಚಿಕಿತ್ಸೆ ತರಬೇತಿ ನೀಡಲಾಯಿತು. ಸದ್ಯದಲ್ಲಿಯೇ ಕೊಡಗಿನಲ್ಲಿ ಕಾವೇರಿ ನದಿಯಲ್ಲಿ ಜಲಕ್ರೀಡೆ ನಡೆಯಲಿರುವದರಿಂದ ಸಂಸ್ಥೆಯ ವತಿಯಿಂದ ಒಂದು ದಿನದ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಈ ತರಬೇತಿಯಲ್ಲಿ ಸ್ಥಳೀಯರು ಮತ್ತು ಬರಪೊಳೆ ವಿಭಾಗದ ಸುಮಾರು ನೂರಕ್ಕೂ ಹೆಚ್ಚು ಸಿಬ್ಬಂದಿ ಹಾಜರಾಗಿದ್ದರು. ಹಲವು ರ್ಯಾಫ್ಟ್ ಮಾಲೀಕರು ಉಪಸ್ಥಿತರಿದ್ದರು.

ನದಿಯಲ್ಲಿ ಮತ್ತು ರಸ್ತೆಯಲ್ಲಿ ಅಪÀಘಾತಗಳು ನಡೆದರೆ ಯಾವ ರೀತಿಯಲ್ಲಿ ಪ್ರಥಮ ಚಿಕಿತ್ಸೆ ನೀಡ ಬಹುದು ಎಂಬದನ್ನು ಪ್ರಾಯೋಗಿಕ ವಾಗಿ ಚಿತ್ರೀಕರಣದ ಮೂಲಕ ವಿವರಿಸಲಾಯಿತು. ಈ ತರಬೇತಿ ಕಾರ್ಯಕ್ರಮದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ನೀಡುತ್ತಿರುವ ಡಾ. ರಾಮಚಂದ್ರ ಕಾಮತ್, ರಾಜ್ಯ ರೆಡ್‍ಕ್ರಾಸ್ ಸಂಸ್ಥೆಯ ಮುರುಳೀಧರ, ಜಿಲ್ಲಾ ಸಮಿತಿಯ ದಿವಾಕರ್ ಮತ್ತು ರತೀಶ್ ಮುಂತಾದವರು ಹಾಜರಿ ದ್ದರು.

ಸುಮಾರು 3 ತಿಂಗಳಿನಿಂದ ರ್ಯಾಫ್ಟಿಂಗ್ ನಿಂತು ಹೋಗಿರುವದ ರಿಂದ ಅದನ್ನೇ ನಂಬಿ ಜೀವನ ನಡೆಸುತ್ತಿರುವವರು ಸಂಕಷ್ಟದಲ್ಲಿದ್ದಾರೆ. ಅಲ್ಲದೆ ಇಡೀ ಕೊಡಗಿನಾದ್ಯಾಂತ ಹೊಟೇಲ್, ಅಂಗಡಿ, ಹೋಂಸ್ಟೆಗಳು, ವಾಹನ ಸವಾರರು ಮತ್ತು ಹಲವಾರು ಉದ್ದಿಮೆಗಳ ಮೇಲೆ ಹೊಡೆತ ಬಿದ್ದಿದೆ. ಕೊಡಗಿಗೆ ಪ್ರವಾಸಿಗರು ಈ ರ್ಯಾಫ್ಟಿಂಗ್ ಗೋಸ್ಕರ ಕೊಡಗಿಗೆ ಬರುತ್ತಿದ್ದರು. ಆದರೆ, ಈ ಜಲಕ್ರೀಡೆ ನಿಂತಿದ್ದರಿಂದ ಮುಖ್ಯವಾಗಿ ದುಬಾರೆ ವಿಭಾಗ ಅಲ್ಲದೆ ಇಡೀ ಕೊಡಗಿನಾದ್ಯಂತ ಪ್ರವಾಸಿಗರನ್ನು ನಂಬಿ ವ್ಯವಹಾರ ಮಾಡುತ್ತಿದ್ದವರು ಮತ್ತು ರ್ಯಾಫ್ಟ್ ಗೈಡ್‍ಗಳಾಗಿ ಕೆಲಸ ನಿರ್ವಹಿಸುತ್ತಿದ್ದವರು ಮತ್ತು ಅವರ ಕುಟುಂಬ ಬೀದಿಗೆ ಬಂದಿದೆ. ಅಲ್ಲದೆ ಲಕ್ಷಾಂತರ ಹಣವನ್ನು ಈ ಉದ್ದಿಮೆಗೆ ಸುರಿದ ಮಾಲೀಕರು ಕೂಡ ಪರಿತಪಿಸುವಂತಾಗಿದೆ.

ಸೂಕ್ತ ತರಬೇತಿ-ಹೊಂದಾಣಿಕೆ ಮತ್ತು ಶಿಸ್ತು ಬದ್ಧ ರ್ಯಾಫ್ಟಿಂಗ್ ಅನ್ನು ಆದಷ್ಟು ಶೀಘ್ರ ಆರಂಭಿಸಲಿ ಎಂಬದು ಎಲ್ಲರ ಹಾರೈಕೆ.

-ಗಣೇಶ್ ಕುಡೆಕ್ಕಲ್