ಕೂಡಿಗೆ, ಜು. 16: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಐದು ಹಸುಗಳು ಸಾವನ್ನಪಿದ ಘಟನೆ ನಡೆದಿದೆ.ಗ್ರಾಮದ ರವಿ ಎಂಬವರ ಒಂದು ಎತ್ತು ಹಾಗೂ ನಾಲ್ಕು ಹಸುಗಳು ಸಮೀಪದ ಕಾಡಿನಲ್ಲಿ ಮೇಯಲು ಹೋಗಿದ ಸಂದರ್ಭ ಸೀಗೆಹೊಸೂರು ಸಮೀಪದ ಮೀಸಲು ಅರಣ್ಯದಲ್ಲಿ ಮೃತಪಟ್ಟಿವೆ.ಬಡ ರೈತನಾಗಿರುವ ರವಿ ಎಂದಿನಂತೆ ತಮ್ಮ ಹಸು ಹಾಗೂ ಎತ್ತುಗಳನ್ನು ಮನೆ ಸಮೀಪವಿರುವ ಮೀಸಲು ಅರಣ್ಯದಲ್ಲಿ ಮೇಯಲು ಬಿಟ್ಟಿದ್ದರು. ಈ ದನಗಳು ಹೋಗುವ ದಾರಿ ಕಾಡಾನೆಗಳು ಪಕ್ಕದ ಜಮೀನಿಗೆ ಬರುವ ದಾರಿಯಾಗಿದ್ದು, ಅದೇ ದಾರಿಯಲ್ಲಿ ಯಾರೋ ಕಿಡಿಗೇಡಿಗಳು ಆನೆಗೆ ವಿಷ ತಿನ್ನಿಸುವ ಪ್ರಯತ್ನ ಮಾಡಿದ್ದಾರೆ. ಹಲಸಿನ ಹಣ್ಣಿನ ಬೀಜದಲ್ಲಿ ವಿಷದ ಔಷಧಿಯನ್ನು ಬೆರೆಸಿ ದಾರಿಯ ಪಕ್ಕದ ಮರ ಹತ್ತಿರ ಇಟ್ಟಿರುತ್ತಾರೆ.ಇದನ್ನು ನೋಡಿದ ಹಸುಗಳು ಹಲಸಿನ ವಾಸನೆಗೆ ತಿಂದು ಸಾವನ್ನಪ್ಪಿವೆ. ಬಡ ರೈತ ರವಿ ದಂಪತಿಗಳು ಗೋಳು ಹೇಳುತೀರದ್ದು. ತಮ್ಮ ಕುಟುಂಬವನ್ನು ನಡೆಸಲು (ಮೊದಲ ಪುಟದಿಂದ) ಈ ಹಸುಗಳೇ ದಾರಿ ದೀಪವಾಗಿದ್ದವು ಎನ್ನುತ್ತಾರೆ ಗ್ರಾಮಸ್ಥರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.