ಮಡಿಕೇರಿ, ಜು. 13: ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಕುಮಾರ್ ಅವರು 20 ದಿನಗಳ ರಜೆಯಲ್ಲಿ ತೆರಳಿದ್ದಾರೆ. ಚಾಮರಾಜನಗರ ಜಿಲ್ಲಾ ಪೊಲೀಸ್ ಅಧೀಕ್ಷಕ ಧರ್ಮೇಂದ್ರ ಮೀನ ಅವರು ಹೆಚ್ಚುವರಿಯಾಗಿ ಮುಂದಿನ 20 ದಿನಗಳ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಇಂದಿನಿಂದ ತಾ. 29ರ ತನಕವೂ ಅವರು ಕೊಡಗಿನಲ್ಲಿ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.