ಮಡಿಕೇರಿ, ಜು. 10: ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲಿನ ನಗರ ಠಾಣಾ ವ್ಯಾಪ್ತಿಯ ಕೊಟ್ಟೋಳಿಯ ನಿವಾಸಿ ಸುಬ್ಬಯ್ಯ (69) ಎಂಬವರು ನಾಪತ್ತೆಯಾಗಿದ್ದು, ಇವರ ಪತ್ನಿ ಲೀಲಾ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ. ತಾ. 7ರಂದು ಕೊಟ್ಟೋಳಿಯಿಂದ ವೀರಾಜಪೇಟೆಗೆಂದು ತೆರಳಿದ್ದ ಸುಬ್ಬಯ್ಯ ವೀರಾಜಪೇಟೆಯಲ್ಲಿ ಅವರ ತಂಗಿ ಹಾಗೂ ಅಣ್ಣನ ಪುತ್ರನೊಂದಿಗೆ ಮಾತನಾಡಿದ್ದು, ಬಳಿಕ ಮನೆಗೆ ಹಿಂತಿರುಗಿಲ್ಲವೆನ್ನಲಾಗಿದೆ. ಇದರಂತೆ ದೂರು ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ವಿವರ ತಿಳಿದು ಬಂದಲ್ಲಿ ವೀರಾಜಪೇಟೆ ಠಾಣೆ (257333) ಗೆ ತಿಳಿಸುವಂತೆ ಕೋರಿದ್ದಾರೆ.