ಕೂಡಿಗೆ, ಜು. 9: ಹೆಬ್ಬಾಲೆ ಗ್ರಾಮ ಪಂಚಾಯಿತಿಯ ವಿಶೇಷ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮುಖ್ಯವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಕಳೆದ 10 ವರ್ಷದ ಹಿಂದೆ ನಡೆದಿದ್ದ ಟೆಂಡರ್ ಬಗ್ಗೆ ಚರ್ಚೆ ನಡೆಯಿತು.

ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಜೂ. 19 ರಂದು ನಡೆದು, ಇದರಲ್ಲಿ 14 ಮಂದಿ ವರ್ತಕರಿಗೆ ಪರವಾನಿಗೆಯನ್ನು ನೀಡುವಂತೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ವಿಶೇಷ ಸಭೆಯಲ್ಲಿ 7 ಅಂಗಡಿಗಳಿಗೆ ಪರವಾನಿಗೆ ನೀಡದಂತೆ 8 ಮಂದಿ ಸದ್ಯಸರು ತೀರ್ಮಾನ ಕೈಗೊಂಡರು.

14 ಜನ ಸದಸ್ಯರಲ್ಲಿ ಸಭೆಗೆ 8 ಜನ ಹಾಜರಿದ್ದರು. ಇನ್ನುಳಿದ 6 ಜನ ಸದ್ಯಸರು ಸಭೆಗೆ ಗೈರಾಗಿದ್ದರು. ಆದರೂ ಸಭೆ ಅಧ್ಯಕ್ಷರ ಆದೇಶದಂತೆ ನಡೆಯಿತು. ಸಭೆಗೆ ಹಾಜರಾಗದ ಸದಸ್ಯರು ಸುದ್ದಿಗಾರರೊಂದಿಗೆ ಮಾತಾನಾಡಿ, ಕಳೆದ ಮಾಸಿಕ ಸಭೆಯಲ್ಲಿ 7 ಅಂಗಡಿಗಳ ಪರವಾನಿಗೆ ನೀಡುವಂತೆ ಸರ್ವಾನುಮತದಿಂದ ತೀರ್ಮಾನ ತೆಗೆದುಕೊಳ್ಳುಲಾಯಿತು. ಇದರಂತೆ ಗ್ರಾಮ ಪಂಚಾಯಿತಿಗೆ ಆದಾಯ ಬರುವದರಿಂದ ಪರವಾನಿಗೆ ನವೀಕರಣ ಮಾಡಲು ಎಲ್ಲರೂ ಒಪ್ಪಿಗೆ ನೀಡಲಾಯಿತು. ಸಾರ್ವಜನಿಕರು ದೂರು ನೀಡಿದ್ದಾರೆ ಎಂಬ ನೆಪದಲ್ಲಿ ರದ್ದು ಮಾಡಲಾಗಿದೆ. ಬಹುಮತದ ಸಭೆಯ ನಡವಳಿಕೆ ರದ್ದು ಮಾಡಿರುವದು ಸರಿಯಾದ ಕ್ರಮವಲ್ಲ ಎಂದು ಸದಸ್ಯ ವಿಜಯ ದೂರಿದ್ದಾರೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿ ಮೇಲಧಿಕಾರಿ ಗಳ ಗಮನಕ್ಕೆ ತರಲಾಗುವದು ಎಂದು ತಿಳಿಸಿದ್ದಾರೆ. ಸಭೆಗೆ ಸದ್ಯಸರಾದ ಶಿವನಂಜಪ್ಪ, ಚೇತನ್, ವೆಂಕಟೇಶ್, ಸರೋಜಮ್ಮ, ಉಪಾಧ್ಯಕ್ಷೆ ಪದ್ಮ ಗೈರಾಗಿದ್ದರು.