ಮಡಿಕೇರಿ, ಜು. 9: ಹಾಸನದ ಮಾಣಿಕ್ಯ ಪ್ರಕಾಶನ ಸಂಸ್ಥೆಯ ವತಿ ಯಿಂದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಕೊಡಗಿನ ವೀರಾಜಪೇಟೆ ತಾಲೂಕಿನ ಕೆ. ಬೋಯಿಕೇರಿ ಗ್ರಾಮದ ವೈಲೇಶ ಇವರ “ಅಮ್ಮ ನಿಮಗಾಗಿ” ಕೃತಿಯ ಲೋಕಾರ್ಪಣೆ ಮಾಡಲಾಯಿತು.
9 ಕವಿಗಳ ಕೃತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಪಿ.ಎಸ್. ವೈಲೇಶ ಹಾಗೂ ಹಾಸನ ಜಿಲ್ಲೆಯ ದೇಸು ಆಲೂರು, ಚಿಕ್ಕಮಗಳೂರು ಜಿಲ್ಲೆಯ ವಿನಯಚಂದ್ರ ಒಟ್ಟು ಮೂರು ಕವಿಗಳ ನಾಲ್ಕು ಕೃತಿಗಳ ಲೋಕಾರ್ಪಣೆಯೊಂದಿಗೆ ರಾಜ್ಯಮಟ್ಟದ ಕವಿಗೋಷ್ಠಿ ನಡೆಸಲಾಯಿತು. ಜಿಲ್ಲೆಯ ಇಬ್ಬರಂತೆ ಕೊಡಗು ಜಿಲ್ಲೆಯ ರಾಚು ಶ್ಯಾಮ್ ಹಾಗೂ ಕಡ್ಲೆರ ತುಳಸಿ ಮೋಹನ್ ಭಾಗವಹಿಸಿದ್ದರು.