ನಾಪೆÇೀಕ್ಲು, ಜು. 9: ಅವಿದ್ಯಾವಂತರು ಅಪರಾಧಗಳನ್ನು ಎಸಗುವದು ಜ್ಞಾನದ ಕೊರತೆಯಿಂದ. ಆದರೆ ಉನ್ನತ ವ್ಯಾಸಂಗ ಪಡೆದ ಇಂದಿನ ಯುವ ಪೀಳಿಗೆ ಭಯೋತ್ಪಾದನೆ, ಅತ್ಯಾಚಾರ, ದೇಶ ದ್ರೋಹದಂತಹ ಸಮಾಜ ಘಾತುಕ ಕೃತ್ಯಗಳನ್ನು ಎಸಗುತ್ತಿರುವದು ಕಂಡು ಬರುತ್ತಿದೆ. ವಿದ್ಯೆಯನ್ನು ದೇಶದ ಪ್ರಗತಿಗೆ, ಸಮಾಜದ ಏಳಿಗೆಗೆ ಬಳಸಿಕೊಳ್ಳಬೇಕು ಎಂದು ಇಂಡೋ ಗ್ಲೋಬಲ್ ಸೋಶಿಯಲ್ ಸರ್ವಿಸ್ ಸೊಸೈಟಿ ವ್ಯವಸ್ಥಾಪಕಿ ಕಲಿಯಂಡ ಮಿಲನ್ ಮಂದಣ್ಣ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸ್ಥಳೀಯ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿ ದರು. ಈಗಿನ ಬಹುತೇಕ ವಿದ್ಯಾರ್ಥಿ ಗಳಲ್ಲಿ ಮತ್ತು ಪೆÇೀಷಕರಲ್ಲಿ ಇಂಜಿನಿಯರ್, ಡಾಕ್ಟರ್‍ಗಳಂತಹ ಹುದ್ದೆಗಳನ್ನು ಗಳಿಸಬೇಕೆಂಬ ಅಭಿಲಾಷೆ ಕಂಡು ಬರುತ್ತಿದೆ. ಆದರೆ ಸಮಾಜ ಸೇವೆಗೆ ಇಂಜಿನಿಯರ್, ಡಾಕ್ಟರ್ ಆಗಬೇಕಾಗಿಲ್ಲ ಎಂದು ಕಿವಿಮಾತು ಹೇಳಿದರು.
ತನ್ನ ಹದಿಮೂರು ವರ್ಷಗಳ ಸಾಧನೆ, ಅನುಭವಗಳನ್ನು ಉದಾಹರಣೆ ಸಹಿತ ವಿದ್ಯಾರ್ಥಿಗಳಿಗೆ ವಿವರಿಸಿದ ಅವರು, ನಾವು ಹೊಟ್ಟೆ ತುಂಬಾ ಅನ್ನ-ನೀರು ಸೇವಿಸಲು ಶಕ್ತರಾಗಿದ್ದೇವೆ. ಆದರೆ ದೇಶದ ಹಲವೆಡೆಗಳಲ್ಲಿ ಒಂದು ಹನಿ ನೀರಿಗೆ, ಒಂದು ತುತ್ತು ಕೂಳಿಗೆ ಕಷ್ಟಪಡ ಬೇಕಾದ ಪರಿಸ್ಥಿತಿ ಇದೆ. ಆದುದರಿಂದ ನೀರು ಮತ್ತು ಆಹಾರವನ್ನು ಪೆÇೀಲು ಮಾಡಬೇಡಿ ಎಂದರು. ವಿದ್ಯಾರ್ಥಿಗಳು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ನಾಯಕತ್ವದಲ್ಲಿ ಗೆಲ್ಲುತ್ತೇವೆಯೋ? ಸೋಲುತ್ತೇವೆಯೋ ? ಎಂಬದು ಮುಖ್ಯವಲ್ಲ ಎಂದು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ನಿವೃತ್ತ ಡಿ.ಸಿ.ಪಿ. ಬಿದ್ದಾಟಂಡ ಎ. ಮುತ್ತಣ್ಣ ಮಾತನಾಡಿ, ಶಾಲಾ ಜೀವನ ವಿದ್ಯಾರ್ಥಿಗಳ ಪಾಲಿಗೆ ಅಮೂಲ್ಯವಾದದ್ದು. ವಿದ್ಯಾರ್ಥಿಗಳು ಶಿಸ್ತು ಮತ್ತು ಸಮಯಪಾಲನೆಗೆ ಹೆಚ್ಚಿನ ಮಹತ್ವ ನೀಡಬೇಕು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಡಾ. ಎಂ. ವಿಶ್ವೇಶ್ವರಯ್ಯ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆದರ್ಶ ಗುಣಗಳನ್ನು ಮೈಗೂಡಿಸಿ ಕೊಳ್ಳಬೇಕು. ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಬೇಕು. ದುಶ್ಚಟಗಳಿಗೆ ಬಲಿ ಯಾಗದೆ ಉತ್ತಮ ಜೀವನ ರೂಪಿಸಿ ಕೊಳ್ಳುವದರೊಂದಿಗೆ ಸಮಾಜದ, ದೇಶದ ಏಳಿಗೆಗೆ ಕೈಜೋಡಿಸಬೇಕು ಎಂದರು.
ಈ ಸಂದರ್ಭ ಶಿಕ್ಷಕಿ ಡಿಂಪಲ್ ಪಿ.ಟಿ. ವಿದ್ಯಾರ್ಥಿ ಸಂಘಕ್ಕೆ ಆಯ್ಕೆ ಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿದರು. ಶಿಕ್ಷಕಿಯರಾದ ಸ್ಮಿತಾ ಮತ್ತು ತನುಜಾ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಜಾಲಿ ಬೋಪಣ್ಣ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಕಾರ್ಯದರ್ಶಿ ಬಿದ್ದಾಟಂಡ ಪಾಪ ಮುದ್ದಯ್ಯ, ಪ್ರಾಂಶುಪಾಲೆ ಬಿ.ಎಂ. ಶಾರದ, ನಿವೃತ್ತ ಪ್ರಾಂಶುಪಾಲ ಹಾಗೂ ನಿರ್ದೇಶಕ ಪೆÇ್ರ. ಕಲ್ಯಾಟಂಡ ಪೂಣಚ್ಚ, ನಿರ್ದೇಶಕರಾದ ಅಪ್ಪಾರಂಡ ಅಪ್ಪಣ್ಣ, ಬೊಪ್ಪಂಡ ಕುಶಾಲಪ್ಪ, ಅರೆಯಡ ಡಿ. ಸೋಮಪ್ಪ, ಕೊಂಬಂಡ ಗಣೇಶ್, ನಾಯಕಂಡ ದೀಪು ಚಂಗಪ್ಪ, ಸುರಕ್ಷಾ ಸಮಿತಿಯ ಎಂ.ಎ. ಮನ್ಸೂರ್ ಅಲಿ, ಅರೆಯಡ ರಘು ಕರುಂಬಯ್ಯ, ಅಪ್ಪಾರಂಡ ದೇವಿ ದೇವಯ್ಯ ಇದ್ದರು. ವಿದ್ಯಾರ್ಥಿನಿಯರಾದ ಪ್ರತೀಕ್ಷಾ, ಯಶಿಕಾ, ಸ್ನೇಹರಿಂದ ಪ್ರಾರ್ಥನೆ, ಶಿಕ್ಷಕಿಯರಾದ ಬೊಳ್ಳಂಡ ಅಖಿಲಾ ಸ್ವಾಗತ, ಚಂದ್ರಕಲಾ ನಿರೂಪಿಸಿ, ಶೋಭಾ ವಂದಿಸಿದರು.
ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು: ಶಾಲಾ ನಾಯಕಿ ಚಶಿಕಾ ಚಂಗಮ್ಮ ಎಂ.ಬಿ, ಉಪನಾಯಕ ತಿಮ್ಮಯ್ಯ ಕೆ.ಪಿ, ಶಾಲಾ ಕಾರ್ಯದರ್ಶಿ ತಾನ್ಯ ಅಯ್ಯಪ್ಪ, ಸಾಂಸ್ಕøತಿಕ ನಾಯಕಿ ಶಮಾ ಎಂ.ಎಂ, ಉಪ ಸಾಂಸ್ಕøತಿಕ ನಾಯಕಿ ಇಂದುಶ್ರೀ ಪಿ.ಎಸ್, ಸಾಂಸ್ಕøತಿಕ ಕಾರ್ಯದರ್ಶಿ ಅನನ್ಯ ಟಿ.ಎಸ್, ಕ್ರೀಡಾ ನಾಯಕಿ ಅನನ್ಯ ಕಾವೇರಿ ಎ.ಡಿ, ಉಪ ಕ್ರೀಡಾ ನಾಯಕಿ ಚರಿತಾ ಪಿ.ಎ, ಕ್ರೀಡಾ ಕಾರ್ಯದರ್ಶಿ ವಿನಿಲ್ ಮಂದಣ್ಣ, ಸ್ವಚ್ಛತಾ ನಾಯಕಿ ಜ್ಯೋತಿ ಸ್ವರೂಪ್, ಉಪ ಸ್ವಚ್ಛತಾ ನಾಯಕಿ ಭುವನಾ, ಸ್ವಚ್ಛತಾ ಕಾರ್ಯದರ್ಶಿ ರಾಕೇಶ್ ಎ.ಪಿ. ಅವರನ್ನು ಆಯ್ಕೆಗೊಳಿಸ ಲಾಯಿತು.