ಚೆಟ್ಟಳ್ಳಿ, ಜು. 8: ಚೆಟ್ಟಳ್ಳಿ ವಿನಾಯಕ ಮನೋರಂಜನಾ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಮುಳ್ಳಂಡ ರತ್ತುಚಂಗಪ್ಪ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಹಿಂದಿನ ವiಹಾಸಭೆಯ ವರದಿ ಹಾಗೂ ಆಡಳಿತ ಮಂಡಳಿಯ ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಓದಿದರು. ಖರ್ಚುವೆಚ್ಚವನ್ನು ಖಜಾಂಜಿ ಕೆ. ಡಿಕ್ಕಿ ಅಪ್ಪಯ್ಯ ಹಾಗೂ ಬಲ್ಲಾರಂಡ ಹರೀಶ್ ಅಪ್ಪಯ್ಯ ಮಂಡಿಸಿದರು.

ರಾಜ್ಯ ಸಮ್ಮಿಶ್ರ ಸರಕಾರವು ರೈತರ ಸಾಲಮನ್ನಾ ಮಾಡುತ್ತೇವೆಂದು ಭರವಸೆ ನೀಡಿ ಯಾವದೇ ಸಾಲ ಮನ್ನಾ ಮಾಡಲಿಲ್ಲ ಎಂದು ಸಂಘದ ಪರವಾಗಿ ಸಭೆಯಲ್ಲಿ ಖಂಡಿಸ ಲಾಯಿತು. ಜಾತ್ಯಾತೀತ ಜನತಾದಳದ ಕಾರ್ಯಕರ್ತ ಕೊಳಂಬೆ ವಿನುಕುಮಾರ್, ಪೇರಿಯನ ಜಯಾನಂದ ಇತರರು ಸರಕಾರದÀ ಮಲತಾಯಿಧೋರಣೆ ಸರಿಯಲ್ಲ ಎಂದರು. ಸಂಘದಿಂದ ಮುಂದಿನ ದಿನಗಳಲ್ಲಿ ಕೃಷಿ ಬಗ್ಗೆ ಅಧ್ಯಯನ ಪ್ರವಾಸ ಕೈಗೊಳ್ಳುವ ಕುರಿತು ರತ್ತುಚಂಗಪ್ಪ ತಿಳಿಸಿದರು.

ಸಂಘದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಅವರು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿ ಸಂಘದ ಪರವಾಗಿ ಹಿರಿಯ ಸದಸ್ಯರಾದ ಬಲ್ಲಾರಂಡ ಕಾರ್ಯಪ್ಪ , ಪೇರಿಯನ ಜಯಾನಂದ ಹಾಗೂ ಸಂಘದ ಅಧ್ಯಕ್ಷ ರತ್ತು ಚಂಗಪ್ಪ ಅವರು ಕರುಣ್ ಕಾಳಯ್ಯ ಅವರನ್ನು ಸನ್ಮಾನಿಸಿ ಗೌರವಿಸಿದರು. ಸಂಘದ ಉಪಾಧ್ಯಕ್ಷ ದಂಬೆಕೋಡಿ ಹರೀಶ್ ವಂದಿಸಿದರು.