ಗೋಣಿಕೊಪ್ಪ ವರದಿ, ಜು. 8 : ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ತಾ. 9 ರಂದು (ಇಂದು) ಸಂಜೆ 7 ಗಂಟೆಗೆ ಗೋಣಿಕೊಪ್ಪ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ. ಈ ಸಂದರ್ಭ ನಿರ್ಗಮಿತ ಅಧ್ಯಕ್ಷ ಮಚ್ಚಮಾಡ ವಿಜಯ್, ನಿಯೋಜಿತ ಅಧ್ಯಕ್ಷ ಪಾರುವಂಗಡ ದಿಲನ್ ಚೆಂಗಪ್ಪ, ರೋಟರಿ ಜಿಲ್ಲಾ ಸಹಾಯಕ ತರಬೇತುದಾರ ಶೇಖರ್ ಶೆಟ್ಟಿ, ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ್, ಝೋನಲ್ ಲೆಫ್ಟಿನೆಂಟ್ ಬಿ. ಎ. ದೇಚಮ್ಮ ಹಾಗೂ ಹಿರಿಯರಾದ ರಂಗನಾಥ್ ಭಟ್ ಪಾಲ್ಗೊಳ್ಳಲಿದ್ದಾರೆ.