ನಾಪೆÇೀಕ್ಲು, ಜು. 8: ಡಿ.ಒನ್. ಇವೇಂಟ್ ಮೆನೆಜ್ಮೆಂಟ್ ವತಿಯಿಂದ ಅಕ್ಟೋಬರ್ ತಿಂಗಳಲ್ಲಿ ಇದೇ ಮೊದಲ ಬಾರಿಗೆ ನಾಪೆÇೀಕ್ಲು ಪ್ರೌಢ ಶಾಲಾ ಮೈದಾನದಲ್ಲಿ ಕೊಡವ ಕುಟುಂಬಗಳ ನಡುವೆ ಮೂರು ದಿನಗಳ ಕಾಲ ಹಗ್ಗಜಗ್ಗಾಟ ಸ್ವರ್ಧೆಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಆಯೋಜಕ ಆಚೇಯಡ ಗಗನ್ ಗಣಪತಿ ತಿಳಿಸಿದರು.ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಇದುವರೆಗೆ ಕೊಡವ ಕುಟುಂಬಗಳ ನಡುವೆ ಹಾಕಿ ಮತ್ತು ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದ್ದು, ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುವ ದೃಷ್ಟಿಯಿಂದ ಕೊಡವ ಕುಟುಂಬದ ಮಹನೀಯರಿಗೂ ಹಾಗೂ ಮಹಿಳೆಯರಿಗೂ ಹಗ್ಗಜಗ್ಗಾಟ ಸ್ವರ್ಧೆ ಏರ್ಪಡಿಸಲು ಚಿಂತನೆ ನಡೆಸಲಾಗಿದೆ ಎಂದರು.

ಪಂದ್ಯಾಟವನ್ನು ಅಂತರರಾಷ್ಟ್ರೀಯ ಮಟ್ಟದಂತೆ ಆಯೋಜಿಸಲು ಕ್ರಮ ಕೈಗೊಳ್ಳಲಾಗುವದು ಎಂದ ಅವರು, ಸ್ವರ್ಧೆಯಲ್ಲಿ ಭಾಗವಹಿಸುವ ಕುಟುಂಬ ತಮ್ಮ ತಂಡಗಳ ಹೆಸರನ್ನು ನೋಂದಾಯಿಸಲು ಕೊಡಗಿನ ಮೂಲೆ ಮೂಲೆಗಳಲ್ಲಿ ನೋಂದಣಿಗೆ ಅವಕಾಶವನ್ನು ಮಾಡಲಾಗುವದು. ಸ್ವರ್ಧೆಯಲ್ಲಿ ಜಯಗಳಿಸುವ ತಂಡಗಳಿಗೆ ನಗದು ಸೇರಿದಂತೆ ಬಹುಮಾನ ನೀಡಲಾಗುವದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಬಾಳೇಯಡ ಪ್ರತೀಶ್ ಇದ್ದರು.