ಮಡಿಕೇರಿ, ಜು. 8: ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ನೃತ್ಯ, ವಾದ್ಯ ಸಂಗೀತ, ನಾಟಕ, ಯಕ್ಷಗಾನ, ಜಾನಪದ ಪ್ರಕಾರಗಳಲ್ಲಿ ಕಾರ್ಯಕ್ರಮ ಏರ್ಪಡಿಸಲು ಕೊಡಗು ಜಿಲ್ಲಾ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ.

ಹಿರಿಯ ಕಲಾವಿದರು, ಯುವ ಕಲಾವಿದರು, ಪ್ರತಿಭಾನ್ವಿತ ಮಕ್ಕಳು ಕಾರ್ಯಕ್ರಮ ನೀಡಬಹುದು. ಆಸಕ್ತ ಕಲಾವಿದರು ಲಭ್ಯವಿರುವ ಅರ್ಜಿ ನಮೂನೆಗಳನ್ನು ಪಡೆದು ಸ್ವವಿವರಗಳೊಂದಿಗೆ ಭರ್ತಿ ಮಾಡಿ ಅರ್ಜಿಯನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಡಿಕೇರಿ ಇವರ ಕಚೇರಿಗೆ ಸಲ್ಲಿಸಬಹುದು.