ಕುಶಾಲನಗರ, ಜು. 7: ಕುಶಾಲನಗರ ರೋಟರಿ ಸಂಸ್ಥೆ ಆಶ್ರಯದಲ್ಲಿ ಕೃತಕ ಕಾಲು ಜೋಡಣಾ ಕಾರ್ಯಕ್ರಮ ಪೂರ್ವಭಾವಿಯಾಗಿ ತಾ. 22 ರಂದು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕುಶಾಲನಗರ ರೋಟರಿ ಮತ್ತು ಇನ್ನರ್ ವ್ಹೀಲ್ ಸಂಸ್ಥೆ ಆಶ್ರಯದಲ್ಲಿ ಅಂದು ಬೆಳಿಗ್ಗೆ 10 ರಿಂದ 4 ಗಂಟೆ ತನಕ ರೋಟರಿ ಸಭಾಂಗಣದಲ್ಲಿ ಕಾಲು ಜೋಡಣೆಗೆ ಅಳತೆ ತೆಗೆಯುವ ಕಾರ್ಯಕ್ರಮ ನಡೆಯಲಿದೆ.
ಕಾಲು ಜೋಡಣಾ ಕಾರ್ಯಕ್ರಮ ಆಗಸ್ಟ್ 15 ರಂದು ನಡೆಯಲಿದೆ ಎಂದು ಸಂಸ್ಥೆ ಅಧ್ಯಕ್ಷ ಕೆ.ಎಂ. ಜೇಕಬ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 9448079115, 9449818835, 9448074226 ಸಂಪರ್ಕಿಸುವಂತೆ ಕೋರಿದ್ದಾರೆ.