ಶ್ರೀಮಂಗಲ, ಜು. 6: ಟಿ.ಶೆಟ್ಟಿಗೇರಿ - ಬಿರುನಾಣಿ ಮುಖ್ಯ ರಸ್ತೆಯ ಏರ್‍ಟೆಲ್ - ಬಿಎಸ್‍ಎನ್‍ಎಲ್ ಟವರ್ ಸಮೀಪ ದೂರವಾಣಿ ಕೇಬಲ್ ಅಳವಡಿಸಲು ತೋಡಿರುವ ಗುಂಡಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ರಸ್ತೆ ಬದಿಯಲ್ಲಿ ಎರಡು ಬೃಹತ್ ಗುಂಡಿಗಳು ಡಾಮರು ರಸ್ತೆಯ ಒತ್ತಿನಲ್ಲಿಯೇ ತೆರೆದುಕೊಂಡಿದ್ದು ಸುಮಾರು 3 ಅಡಿ ಆಳ ಹಾಗೂ 4 ಅಡಿ ಉದ್ದಕ್ಕೆ ತೋಡಿ ಸುಮಾರು 4 ತಿಂಗಳೂ ಕಳೆದಿದೆ. ಕಾಮಗಾರಿ ಮಾಡಿ ಗುಂಡಿಯನ್ನು ಮುಚ್ಚಬೇಕಾಗಿದ್ದರೂ ಮುಚ್ಚದೆ ರಸ್ತೆಯಲ್ಲಿ ಸಂಚರಿಸುವ ವಾಹನ ಹಾಗೂ ಜನರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯವರು ತಕ್ಷಣ ಕ್ರಮಕೈಗೊಂಡು ಗುಂಡಿ ಮುಚ್ಚಲು ಮುಂದಾಗಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.