ಮಡಿಕೇರಿ, ಜು. 6: ಹಾಕತ್ತೂರು ತೊಂಬತ್ತುಮನೆ ನಿವಾಸಿ ಗುರುವ (60) ಎಂಬ ವ್ಯಕ್ತಿ ಕಳೆದ ಜೂ. 29ರಂದು ಕಗ್ಗೋಡ್ಲುವಿಗೆ ಹೋಗಿ ಬರುವದಾಗಿ ಮನೆಯಿಂದ ಹೋಗಿದ್ದು, ಈತನಕ ಹಿಂತಿರುಗಿ ಬಂದಿಲ್ಲವೆಂದು ಆತನ ಪತ್ನಿ ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.