ಚೆಟ್ಟಳ್ಳಿ, ಜು. 7 : ಚೆಟ್ಟಳ್ಳಿ ವಿನಾಯಕ ಮನೋರಂಜನಾ ಸಂಘದ ವಾರ್ಷಿಕÀ ಮಹಾಸಭೆಯು ತಾ. 8ರಂದು (ಇಂದು) ಪೂರ್ವಾಹ್ನ 10 ಗಂಟೆಗೆ ಸಂಘದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಲಿದೆ.
ಈ ಸಂದರ್ಭ ಜಿಲ್ಲಾ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ಸಂಘದ ಕಾರ್ಯದರ್ಶಿ, ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ ಅವರನ್ನು ಸನ್ಮಾನಿಸಲಾಗುವದು.