ಶ್ರೀಮಂಗಲ, ಜು. 7: 2018-19ನೇ ಸಾಲಿನ ಬಾಳೆಲೆ ಹೋಬಳಿ ವ್ಯಾಪ್ತಿ ರೈತರಿಗೆ ಮುಂಗಾರಿನ ಭತ್ತದ ಕೃಷಿಯಲ್ಲಿ ಬೀಜಗಳ ಉಪಚಾರ ಹಾಗೂ ಕೀಟರೋಗ ಹತೋಟಿ ಕ್ರಮದಲ್ಲಿ ಸುರಕ್ಷಿತವಾಗಿ ಕೀಟನಾಶ ಮತ್ತು ರೋಗನಾಶಕಗಳನ್ನು ಬಳಸುವ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಕೃಷಿ ಇಲಾಖೆ ವತಿಯಿಂದ ತಾ. 9 ರಂದು ಪೂರ್ವಾಹ್ನ 11 ಗಂಟೆಗೆ ಬಾಳೆಲೆ ರೈತ ಸಂಪರ್ಕ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.