ಮಡಿಕೇರಿ, ಜು. 7: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯ ಎದುರು ಭಾಗದ ಕೆರೆಯು ಪ್ರಸಕ್ತ ಪುನರ್ವಸು ಪ್ರಥಮ ಮಳೆಗೆ ತುಂಬಿಕೊಂಡಿದೆ. ದೇವಾಲಯ ಮುಂಭಾಗದ ಈ ಚಿತ್ರ ಕೆರೆ ಎಂಬ ಐತಿಹ್ಯದ ಕೆರೆ ನೀರು ತುಂಬಿಕೊಂಡು ನೀರು ರಸ್ತೆಯಲ್ಲಿ ಹರಿಯತೊಡಗಿದೆ.

ಪ್ರಸಕ್ತ ತುಂಬಿಕೊಂಡಿರುವ ಕೆರೆಯು ವಿಹಂಗಮ ನೋಟವು ಸನ್ನಿದಿಗೆ ಬರುವ ಭಕ್ತರ ಸಹಿತ ಪ್ರವಾಸಿಗರಿಗೆ ಕಣ್ಮನ ಸೆಳೆಯುವಂತಿದೆ. ಸುತ್ತ ನೀರಿನಿಂದ ಆವ್ರತ ಮಧ್ಯದ ಕುಶಲ ಮಂಟಪವು ಅತ್ಯಾಕರ್ಷಕವಾಗಿ ಕಾಣುತ್ತಿದೆ.