ಗೋಣಿಕೊಪ್ಪ ವರದಿ, ಜು. 7: ಇಲ್ಲಿನ ಪೊಲೀಸ್ ಠಾಣೆ ವತಿಯಿಂದ ಕಾವೇರಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

ಗೋಣಿಕೊಪ್ಪ ವೃತ್ತ ನಿರೀಕ್ಷಕ ಹರಿಶ್ಚಂದ್ರ ಅವರು ವಾಹನ ಚಾಲನೆ ಸಂದರ್ಭ ಚಾಲಕರ ಮೇಲಿರುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಈ ಸಂದರ್ಭ ಅಫಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಕಾವೇರಿ ಕಾಲೇಜಿನ ವಿದ್ಯಾರ್ಥಿ ಲಾರೆನ್ಸ್ ಅವರನ್ನು ಪೊಲೀಸ್ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.

ಪ್ರಾಂಶುಪಾಲೆ ಎಸ್.ಆರ್. ಉಷಾಲತ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ವಕೀಲ ಸಂಜೀವ, ವಿಮಾ ಸಲಹೆಗಾರ ಗಣಪತಿ, ಉರಗ ಪ್ರೇಮಿ ಶರತ್‍ಕಾಂತ್, ಉಪನ್ಯಾಸಕರುಗಳಾದ ಭಾರತಿ, ಕಾವೇರಪ್ಪ ಇದ್ದರು.