ಮಡಿಕೇರಿ, ಜು. 6: ಕರ್ನಾಟಕ ಲಲಿತಕಲಾ ಅಕಾಡೆಮಿಯು ಪ್ರತಿ ವರ್ಷದಂತೆ 2018ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗಾಗಿ ಈ ಚಿತ್ರಕಲೆಗೆ ಸಂಭಂಧಿಸಿದ ಕನ್ನಡ ಪುಸ್ತಕ ಆಹ್ವಾನಿಸಿದೆ. ಪ್ರತಿ ಪ್ರಾಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡುವ ಒಂದು ಪುಸ್ತಕಕ್ಕೆ ಬಹುಮಾನ ನೀಡಲಾಗುವದು. ಬಹುಮಾನಕ್ಕೆ ಸಲ್ಲಿಸುವ ಪುಸ್ತಕಗಳು 2017 ಜನವರಿ 1 ರಿಂದ 2017 ರ ಡಿಸೆಂಬರ್ 31 ರೊಳಗೆ ಪ್ರಥಮ ಆವೃತ್ತಿ ಪ್ರಕಟವಾಗಿರುವ ಪುಸ್ತಕಗಳಾಗಿರಬೇಕು. ಪುಸ್ತಕದ ತಾಂತ್ರಿಕ ಪುಟದಲ್ಲಿ ಪ್ರಥಮ ಮುದ್ರಣ 2017 ಎಂದು ಮುದ್ರಿತವಾಗಿರಬೇಕು.
ಪುಸ್ತಕ ಬಹುಮಾನದ ಮೊತ್ತ ರೂ. 25 ಸಾವಿರ ಆಗಿದ್ದು, ಪುಸ್ತಕ ಬಹುಮಾನಕ್ಕೆ ಕಳುಹಿಸುವ ಪುಸ್ತಕಗಳು ಪುನರ್ ಮುದ್ರಣವಾಗಿರಬಾರದು. ಮೊದಲ ಆವೃತ್ತಿಯಲ್ಲಿ ಪ್ರಕಟಗೊಂಡಿರಬೇಕು, ಪುಸ್ತಕ ಬಹುಮಾನಕ್ಕೆ ಕಳುಹಿಸುವ ಪುಸ್ತಕಗಳು ಯಾವದೇ ತರಗತಿಗಳಿಗೆ ಪಠ್ಯ ಪುಸ್ತಕವಾಗಿರಬಾರದು, ಪುಸ್ತಕವು ಲೇಖಕರ ಸ್ವಂತ ರಚನೆ ಆಗಿರಬೇಕು. ಸಂಪಾದಿತ ಕೃತಿಯಾಗಿರಬಾರದು, ಪುಸ್ತಕ ಬಹುಮಾನಕ್ಕೆ ಆಯ್ಕೆಯಾದ ಪುಸ್ತಕದ ಲೇಖಕರಿಗೆ ಈ ಬಹುಮಾನ ನೀಡತಕ್ಕದ್ದು, ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡುವಾಗ ಈ ವರ್ಷದಲ್ಲಿ ಕನಿಷ್ಟ 3 ಪುಸ್ತಕಗಳು ಬಹುಮಾನಕ್ಕೆ ಸ್ವೀಕೃತವಾಗಿರಬೇಕು. ಒಂದೇ ಪ್ರಾಕಾರದಲ್ಲಿ ಎರಡು ಬಾರಿ ಪುಸ್ತಕ ಬಹುಮಾನ ಪಡೆದವರ ಪುಸ್ತಕವನ್ನು ಅದೇ ಪ್ರಾಕಾರದಲ್ಲಿ ಮತ್ತೆ ಬಹುಮಾನಕ್ಕೆ ಪರಿಗಣಿಸಲಾಗುವದಿಲ್ಲ. ವಿವಿಧ ಸರ್ಕಾರಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ, ಇತರ ಎಲ್ಲಾ ಅಕಾಡೆಮಿಗಳು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇನ್ನೂ ಮುಂತಾದ ಅನುದಾನ ಸಂಸ್ಥೆಗಳಿಂದ ಅನುದಾನ ಪಡೆದು ತಾವೇ ಪ್ರಕಟಿಸಿದ ಅಥವಾ ಅಂತಹ ಸಂಸ್ಥೆಗಳು ಬರೆಸಿ ಪ್ರಕಟಿಸಿದ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸುವದಿಲ್ಲ.
ಲಲಿತಕಲೆಗೆ ಸಂಬಂಧಪಟ್ಟ ಸಾಂಪ್ರದಾಯಿಕ ಸಮಕಾಲೀನ ಯಾವದೇ ಪ್ರಾಕಾರದ (ಚಿತ್ರಕಲೆ) ಲಲಿತ ಕಲೆಗೆ ಸಂಬಂಧಪಟ್ಟದ್ದಾಗಿರಬೇಕು, ಪಿ.ಹೆಚ್.ಡಿ. ಡಿ.ಲಿಟ್ ಅಥವಾ ಅಧ್ಯಯನಕ್ಕಾಗಿ ಮಾಡಿದಂತಹ ಪುಸ್ತಕಗಳನ್ನು ಪರಿಗಣಿಸಲಾಗುವದಿಲ್ಲ. ಕೃತಿ ಪುಸ್ತಕ ಕನಿಷ್ಟ 100 ಪುಟಗಳಿಗೂ ಹೆಚ್ಚಿನ ಪುಟಗಳನ್ನು ಹೊಂದಿರಬೇಕು. ಒಬ್ಬ ಲೇಖಕರು ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿ ಬಹುಮಾನ ಪಡೆದ ನಂತರ ಆ ಲೇಖಕರು ಮತ್ತೆ 3 ವರ್ಷಗಳ ವರೆಗೆ ಲಲಿತಕಲೆಗೆ ಅಕಾಡೆಮಿಯಿಂದ ಬಹುಮಾನ ಪಡೆಯಬಾರದು. ಅವಧಿಯಲ್ಲಿ ಪ್ರಕಟವಾದ ಪುಸ್ತಕಗಳ ತಲಾ 4 ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಭವನ 2ನೇ ಮಹಡಿ ಜೆ.ಸಿ ರಸ್ತೆ ಬೆಂಗಳೂರು-580002. ಇವರಿಗೆ ನೋಂದಣಿ ಅಂಚೆ/ಕೊರಿಯರ್ ಮೂಲಕ ಅಥವಾ ಖುದ್ದಾಗಿ ಆಗಸ್ಟ್ 29 ರೊಳಗೆ ತಲಪಿಸಬೇಕಾಗಿ ಕೋರಿದೆ. ಕಳುಹಿಸಲ್ಪಡುವ ಪುಸ್ತಕದ ಮೇಲೆ ತಿಳಿಸಿದ ಪ್ರಾಕಾರಗಳಲ್ಲಿ ಯಾವ ಚಿತ್ರಕಲಾ ಪ್ರಾಕಾರಕ್ಕೆ ಸೇರುತ್ತದೆ ಎನ್ನುವದನ್ನು ಸ್ಪಷ್ಟವಾಗಿ ಪುಸ್ತಕದ ಶೀರ್ಷಿಕೆ ಪುಟದಲ್ಲಿ ಬರೆದಿರಬೇಕು ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.