ಮಡಿಕೇರಿ, ಜು. 6: ಕೆ.ಡಬ್ಲ್ಯು.ಎ.ಎ. ಸಂಸ್ಥೆ ಕೊಡ ಮಾಡುವ ಕರ್ನಾಟಕ ರಾಜ್ಯದ ಅಪ್ರತಿಮ ಸಾಧಕಿ (ಕ್ರೀಡೆ) ಪ್ರಶಸ್ತಿಗೆ ಕೊಡಗಿನ ಅನುಪಮಾ ಮುಂಡಂಡ ಮಂದಣ್ಣ ಭಾಜನರಾಗಿದ್ದಾರೆ.ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮಾಜೀ ಪ್ರಧಾನಿ ಹೆಚ್.ಡಿ. ದೇವೇಗೌಡ, ಚೆನ್ನಮ್ಮ ದೇವೇಗೌಡ ಪ್ರಶಸ್ತಿ ವಿತರಿಸಿ ಸನ್ಮಾನಿಸಿದರು.ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಓಂಪ್ರಕಾಶ್, ಶಾಲಿನಿ ರಜನೀಶ್ ಹಾಗೂ ಇತರರು ಸಮಾರಂಭದಲ್ಲಿ ಹಾಹಜರಿದ್ದರು.
ಅನುಪಮಾ ಮಂದಣ್ಣ ಅವರು ಹಾಕಿ ಅಂಪೈರ್ ಆಗಿ ಎಂಭತ್ತೈದು ರಾಷ್ಟ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಸಾಧನೆಗೈದಿದ್ದಾರೆ.