ಸಿದ್ದಾಪುರ, ಜು. 5: ಆನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಕಣ್ಣಂಗಾಲ ಗ್ರಾಮದ ಪಲ್ಲಕೆರೆ ಕಾಫಿ ತೋಟದಲ್ಲಿ ನಡೆದಿದೆ. ಕಣ್ಣಂಗಾಲ ಗ್ರಾಮದ ಟಾಟಾ ಕಂಪೆನಿಗೆ ಸೇರಿದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡಿನ ಪೈಕಿ ಹೆಣ್ಣಾನೆ (15) ವರ್ಷ ಪ್ರಾಯದ ಕಾಡಾನೆಯು ಕಳೆದ ಕೆಲವು ದಿನಗಳಿಂದ ತೋಟದ ಸಮೀಪದ ಕೆರೆಯೊಂದರಲ್ಲಿ ದಿನನಿತ್ಯ ಆಟವಾಡುತ್ತಿತ್ತು ಎನ್ನಲಾಗಿದೆ. ಆದರೆ ಗುರುವಾರದಂದು ಕಾಡಾನೆಯು ಅನಾರೋಗ್ಯದಿಂದ ಕಾಫಿ ತೋಟದೊಳಗೆ ಮೃತಪಟ್ಟಿದೆ.ಸಾವನ್ನಪ್ಪಿದ ಕಾಡಾನೆಯನ್ನು ಪಾಲಿಬೆಟ್ಟದ ಪಶು ವೈದ್ಯಾಧಿಕಾರಿ ಸುನಿಲ್ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ ಹೊಟ್ಟೆ ಹಾಗೂ ಶರೀರದೊಳಗೆ ಹುಳುಗಳು ಹಾಗೂ ಮೊಟ್ಟೆಗಳು ಕಂಡು ಬಂದಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಕಾಡಾನೆಯು ಕೆರೆಯಿಂದ ಮೇಲೆ ಬಂದಿದ್ದರೂ, ನಂತರ ಕೆರೆಯಲ್ಲಿ ಇರುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದರು ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು ಆನೆಯನ್ನು ಸ್ಥಳಕ್ಕೆ ಕರೆಸಿ ಕಾಡಾನೆಯಿಂದ ಮರಣೋತ್ತರ ಪರೀಕ್ಷೆ ನಡೆಸಿ ಕಳೆಬರಹಗಳನ್ನು ಸ್ಥಳದಲ್ಲೇ ಹೂತುಹಾಕಲಾಯಿತು. ವೀರಾಜಪೇಟೆ ಡಿಸಿಎಫ್ ಮರಿಯ ಕ್ರಿಸ್ತುರಾಜು, ಎಸಿಎಫ್ ರೋಶಿಣಿ, ಆರ್.ಎಫ್.ಓ. ಗೋಪಾಲ್, ಉಪವಲಯ ಅರಣ್ಯಾಧಿಕಾರಿ ದೇವಯ್ಯ, ಗಣೇಶ್, ಆರ್.ಆರ್.ಟಿ. ತಂಡದ ಸಿಬ್ಬಂದಿಗಳು ಹಾಜರಿದ್ದರು.

-ವಾಸು